ಟೋಕಿಯೋ : ಒಲಿಂಪಿಕ್ಸ್ನ 100 ಮೀಟರ್ ಓಟದಲ್ಲಿ ಜಮೈಕಾದ ಓಟಗಾರ್ತಿ ಕೇವಲ 10.61 ಸೆಕೆಂಡ್ನಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದರ ಜೊತೆಗೆ ಒಲಿಂಪಿಕ್ಸ್ ಇತಿಹಾಸದಲ್ಲೇ 2ನೇ ಅತಿ ವೇಗವಾಗಿ ಓಡಿರುವ ದಾಖಲೆ ನಿರ್ಮಾಣ ಮಾಡಿದ್ದಾರೆ.
ಜಮೈಕಾದ ಎಲೈನ್ ಥೋಮ್ಪ್ಸರಾ ಹೆರಾ ಈ ದಾಖಲೆ ನಿರ್ಮಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ನಂತರ 10.74 ಸೆಕೆಂಡ್ನಲ್ಲಿ ಗುರಿ ಮುಟ್ಟುವ ಮೂಲಕ ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಶೆಲ್ಲಿ ಆನ್ ಫ್ರೇಸರ್ ಪ್ರೇಸ್ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
10.76 ಸೆಕೆಂಡ್ನಲ್ಲಿ ಗುರಿ ಮುಟ್ಟಿರುವ ಜಾಕ್ಸನ್ ಕಂಚಿನ ಪದಕ ಪಡೆದು ತೃಪ್ತಿ ಪಟ್ಟುಕೊಂಡಿದ್ದಾರೆ. ವಿಶೇಷವೆಂದರೆ ಮೂರು ಪದಕ ಪಡೆದುಕೊಂಡಿರುವ ಇವರು ಜಮೈಕಾದ ಓಟಗಾರ್ತಿಯರು ಎಂಬುದು ಗಮನಾರ್ಹ ಸಂಗತಿ.
ಇದನ್ನೂ ಓದಿರಿ: ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ಅಡ್ಡಿಪಡಿಸಿ, ಕಾಲಿಗೆ ಸುತ್ತಿಕೊಂಡ ಹಾವು.. ವಿಡಿಯೋ ವೈರಲ್
1988ರ ಒಲಿಂಪಿಕ್ಸ್ನಲ್ಲಿ ಗ್ರಿಫಿತ್-ಜಾಯ್ನರ್ ಕೇವಲ 10.49 ಸೆಕೆಂಡ್ಗಳಲ್ಲಿ 100 ಮೀಟರ್ ಓಡಿ ಐತಿಹಾಸಿಕ ದಾಖಲೆ ಬರೆದಿದ್ದರು. ಅದು ಈವರೆಗೂ ಹಾಗೇ ಉಳಿದಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಈವರೆಗೆ ಕೇವಲ 1 ಪದಕ ಮಾತ್ರ ಗೆದ್ದಿದೆ. ಆದರೆ, ಚೀನಾ 46 ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಆತಿಥೇಯ ಜಪಾನ್ 30 ಪದಕಗಳೊಂದಿಗೆ ಎರಡನೇ ಸ್ಥಾನ ಹಾಗೂ 46 ಪದಕಗಳೊಂದಿಗೆ ಯುಎಸ್ 3ನೇ ಸ್ಥಾನದಲ್ಲಿದೆ.