ಕರ್ನಾಟಕ

karnataka

ETV Bharat / sports

ಬೆಳ್ಳಿ ಗೆದ್ದರೂ 'ಚಿನ್ನ'ದಂತಹ ಮನಸು... ಟ್ರಕ್​ ಡ್ರೈವರ್​ಗಳಿಗೆ ಈ ರೀತಿ ಕೃತಜ್ಞತೆ​ ಹೇಳಿದ ಮೀರಾ!

ಮೀರಾಬಾಯಿ ಚನು ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ. ಇದರ ಹಿಂದೆ ನೂರಾರು ಜನರ ಪರಿಶ್ರಮವಿದೆ. ಅವರೆಲ್ಲರಿಗೂ ಬೆಳ್ಳಿ ಪದಕ ವಿಜೇತೆ ಇದೀಗ ಕೃತಜ್ಞತೆ ಸಲ್ಲಿಸಿದ್ದಾರೆ.

Olympian Mirabai Chanu
Olympian Mirabai Chanu

By

Published : Aug 6, 2021, 5:18 PM IST

Updated : Aug 6, 2021, 5:25 PM IST

ಇಂಫಾಲ್​(ಮಣಿಪುರ):ಸಾಧನೆ ಮಾಡುವ ಪ್ರತಿ ವ್ಯಕ್ತಿಯ ಹಿಂದೆ ಸ್ಫೂರ್ತಿಯ ಕತೆ ಇರುತ್ತದೆ. ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತಕ್ಕಾಗಿ ಬೆಳ್ಳಿ ಪದಕ ಗೆದ್ದುಕೊಟ್ಟಿರುವ ಮೀರಾಬಾಯಿ ಚನು ಯಶಸ್ಸಿನ ಹಿಂದೆ ರೋಚಕ ಕತೆ ಇದೆ. ಕಷ್ಟದ ಸಮಯದಲ್ಲಿ ವೇಟ್​ ಲಿಪ್ಟರ್​ಗೆ ಸಹಾಯ ಮಾಡಿರುವ ನೂರಾರು ಜನರಿಗೆ ಇದೀಗ ಬೆಳ್ಳಿ ಪದಕ ವಿಜೇತೆ ಕೃತಜ್ಞತೆ ಸಲ್ಲಿಕೆ ಮಾಡಿದ್ದಾರೆ.

ತರಬೇತಿ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಮೀರಾಬಾಯಿ ಚನುಗೆ ಸಹಾಯ ಮಾಡಿರುವ 150 ಟ್ರಕ್​ ಡ್ರೈವರ್​​ ಹಾಗೂ ಹೆಲ್ಪರ್​ಗಳಿಗೆ ಇದೀಗ ಮೀರಾಬಾಯಿ ಚನು ಮಣಿಪುರಿ ಸ್ಕಾರ್ಫ್​​, ಶರ್ಟ್ಸ್ ನೀಡಿರುವ ಜೊತೆಗೆ ಊಟ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಕೃತಜ್ಞತೆ ಸಲ್ಲಿಕೆ ಮಾಡಿ, ಭಾವುಕರಾಗಿದ್ದಾರೆ.

ಏನಿದು ಮೀರಾಬಾಯಿ ಸ್ಟೋರಿ!

49 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ನಲ್ಲಿ ಮೀರಾ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದು, ಇದಕ್ಕೂ ಮೊದಲು ತಾವು ತರಬೇತಿ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಅನೇಕ ರೀತಿಯ ತೊಂದರೆ ಅನುಭವಿಸಿದ್ದಾರೆ. ಮೀರಾಬಾಯಿ ಅವರ ಗ್ರಾಮ ನೋಂಗ್​ಪಾಕ್​ ಕಾಕ್ಚಿಂಗ್​ ಮಣಿಪುರದ ರಾಜಧಾನಿ ಇಂಫಾಲ್​ನಿಂದ 25 ಕಿಲೋ ಮೀಟರ್ ದೂರದಲ್ಲಿತ್ತು. ನಿತ್ಯ ಅಲ್ಲಿಗೆ ತೆರಳಲು ಅನೇಕ ಟ್ರಕ್ ಡ್ರೈವರ್​ಗಳು ಮೀರಾಗೆ ಲಿಫ್ಟ್​ ನೀಡುತ್ತಿದ್ದರು.

ಇದನ್ನೂ ಓದಿರಿ: ವೈದ್ಯಕೀಯ ಚಿಕಿತ್ಸೆಗಾಗಿ ಪಿಎಂ ಅಮೆರಿಕಕ್ಕೆ ಕಳುಹಿಸಿದ್ದು ನಿಜ, ತರಬೇತಿ ವೇಳೆ ಸಾಕಷ್ಟು ಸಹಾಯ: ಮೀರಾಬಾಯಿ ಚನು!

ಇದೀಗ ಅವರಿಗೆ ಮೀರಾಬಾಯಿ ಕೃತಜ್ಞತೆ ಸಲ್ಲಿಕೆ ಮಾಡಿದ್ದಾರೆ. ಒಂದು ವೇಳೆ ನೀವೂ ನನಗೆ ಲಿಫ್ಟ್​ ನೀಡದಿದ್ದರೆ ನಾನು ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಸಹಾಯಕ್ಕಾಗಿ ನಾನು ಯಾವಾಗಲೂ ಆಭಾರಿಯಾಗಿರುತ್ತೇನೆ ಎಂದು ಕಣ್ಣೀರು ಸಹ ಹಾಕಿದ್ದಾರೆ.

ಟೋಕಿಯೋದಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಬಂದ ತಕ್ಷಣವೇ ಟ್ರಕ್​ ಡ್ರೈವರ್​ಗಳ ಹುಡುಕಾಟದಲ್ಲಿ ಮಗ್ನವಾಗಿದ್ದ ಮೀರಾಬಾಯಿ ಚನು ಇಂದು ಸಣ್ಣದಾದ ಕಾರ್ಯಕ್ರಮ ಆಯೋಜನೆ ಮಾಡಿ, ಅವರಿಗೆ ಸಹಾಯ ಮಾಡಿದ್ದಾರೆ.

Last Updated : Aug 6, 2021, 5:25 PM IST

ABOUT THE AUTHOR

...view details