ಟೋಕಿಯೋ: ಭಾರತಕ್ಕೆ ಭಾನುವಾರ ಪ್ಯಾರಾಲಿಂಪಿಕ್ಸ್ನಲ್ಲಿ ಶುಭದಿನವಾಗಿದೆ. ಬೆಳಿಗ್ಗೆ ಭಾವಿನಾಬೆನ್ ಪಟೇಲ್ ಟೇಬಲ್ ಟೆನಿಸ್ನಲ್ಲಿ ಬೆಳ್ಳಿ ಪದಕ ಗೆದ್ದು ಶುಭಾರಂಭ ಮಾಡಿದ್ದರು. ಇದೀಗ ಹೈಜಂಪ್ನಲ್ಲಿ ನಿಷಾದ್ ಕುಮಾರ್ ದೇಶಕ್ಕೆ 2ನೇ ಬೆಳ್ಳಿಪದಕ ತಂದುಕೊಟ್ಟಿದ್ದಾರೆ.
ಭಾನುವಾರ ನಡೆದ ಪುರುಷರ ಹೈ ಜಂಪ್ ಟಿ46 ವಿಭಾಗದಲ್ಲಿ 2.06 ಮೀಟರ್ ಜಿಗಿಯುವ ಮೂಲಕ ಏಷ್ಯಾದ ದಾಖಲೆಯೊಂದಿಗೆ ನಿಷಾದ್ ಬೆಳ್ಳಿಪದಕ ಕೊರಳಿಗೇರಿಸಿಕೊಂಡಿದ್ದಾರೆ. ಇದು ಹೈಜಂಪ್ ವಿಭಾಗದಲ್ಲಿ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ದೊರೆತ 2ನೇ ಪದಕವಾಗಿದೆ. 2012ರಲ್ಲಿ ಕರ್ನಾಟಕದ ಗಿರೀಶ್ ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿಪದಕ ಗೆದ್ದಿದ್ದರು. ಇದು ಆ ಕ್ರೀಡಾಕೂಟದಲ್ಲಿ ಭಾರತಕ್ಕೆ ಸಂದಿದ್ದ ಏಕೈಕ ಪದಕವಾಗಿತ್ತು.