ಕರ್ನಾಟಕ

karnataka

ETV Bharat / sports

ಭುಜದ ನೋವು ಮರೆತು ತೋಳ್ಬಲ ಪ್ರದರ್ಶಿಸಿ ಬೆಳ್ಳಿ ಗೆದ್ದ ಮಣಿಪುರದ ಕುವರಿ

ತನ್ನ ಕೋಣೆಯೊಳಗೆ ಉಳಿದು ತಿಂಗಳುಗಳ ನಂತರ ತರಬೇತಿ ಪುನರಾರಂಭಿಸಿದ ಚನು, ಭುಜದ ಸಮಸ್ಯೆ ಎದುರಿಸಲಾರಂಭಿಸಿದರು. ಇದು ವೇಟ್‌ಲಿಫ್ಟಿಂಗ್‌ನಲ್ಲಿನ ಎರಡು ಘಟನೆಗಳಲ್ಲಿ ಒಂದಾದ ಸ್ನ್ಯಾಚ್‌ನಲ್ಲಿನ ಅವರ ಕಾರ್ಯಕ್ಷಮತೆಯ ಮೇಲೆ ತೀವ್ರವಾಗಿ ಪರಿಣಾಮ ಬೀರಿತು. ಅದನ್ನು ಸರಿಪಡಿಸಲು, ಅವರು ಕಳೆದ ವರ್ಷ ಚಿಕಿತ್ಸೆ ಪಡೆಯಲು ಯುಎಸ್​ಗೆ ಹಾರಿದರು..

ಭುಜದ ನೋವು ಮರೆತು ತೋಳ್ಬಲ ಪ್ರದರ್ಶಿಸಿ ಬೆಳ್ಳಿ ಗೆದ್ದ ಮಣಿಪುರದ ಕುವರಿ
ಭುಜದ ನೋವು ಮರೆತು ತೋಳ್ಬಲ ಪ್ರದರ್ಶಿಸಿ ಬೆಳ್ಳಿ ಗೆದ್ದ ಮಣಿಪುರದ ಕುವರಿ

By

Published : Jul 27, 2021, 5:27 PM IST

ನವದೆಹಲಿ :ದಣಿವರಿವಿಲ್ಲದೆ ತರಬೇತಿ ನೀಡುವುದು, ಕುಟುಂಬದಿಂದ ದೂರವಿರುವುದು ಮತ್ತು ಐದು ವರ್ಷಗಳ ಕಾಲ ಕಟ್ಟುನಿಟ್ಟಿನ ಆಹಾರವನ್ನು ಕಾಯ್ದುಕೊಳ್ಳುವುದು ಅಂತಿಮವಾಗಿ ಮೀರಾಬಾಯಿ ಚನು ಅವರು ತೀವ್ರವಾಗಿ ಕಾಯುತ್ತಿದ್ದ ಕ್ಷಣಕ್ಕೆ ಅವರನ್ನು ಕೊಂಡೊಯ್ಯಿತು.

ಟೋಕಿಯೋ ಒಲಂಪಿಕ್ಸ್​ ಕ್ರೀಡಾಕೂಟವನ್ನು ಮುಂದೂಡುವುದು ಮತ್ತು ಕಳೆದ ವರ್ಷ ಕೋವಿಡ್​-19 ಲಾಕ್‌ಡೌನ್ ಕಾರಣದಿಂದಾಗಿ ತರಬೇತಿಯ ವಿರಾಮದಿಂದಾಗಿ ಮೀರಾಬಾಯಿ ಚನು ಭುಜದ ಸಮಸ್ಯೆಗೆ ಒಳಗಾಗಿದ್ದರು. "ಲಾಕ್‌ಡೌನ್ ನಂತರ ನಾನು ತರಬೇತಿ ಪ್ರಾರಂಭಿಸಿದಾಗ, ನನ್ನ ಬೆನ್ನು ನೂವು ಹೆಚ್ಚಾಗಲು ಪ್ರಾರಂಭಿಸಿತು ಮತ್ತು ನನ್ನ ಬಲ ಭುಜಕ್ಕೆ ಕೆಲವು ಸಮಸ್ಯೆಗಳು ಉಂಟಾದವು. ಇದು ಗಾಯವಲ್ಲ. ಆದರೆ, ಭಾರವನ್ನು ಎತ್ತುವ ಸಮಯದಲ್ಲಿ ಅದು ಬಿಗಿಯಾಗುತ್ತಿತ್ತು" ಎಂದು ಚನು ತಮ್ಮ ತರಬೇತಿಯಲ್ಲಾದ ಕಷ್ಟವನ್ನು ಹಂಚಿಕೊಂಡಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ನಾನು ತರಬೇತಿಯನ್ನು ನಿಲ್ಲಿಸಿದ್ದರಿಂದ ನನಗೆ ಆರೋಗ್ಯ ಸಮಸ್ಯೆ ಉಂಟಾಗಲು ಕಾರಣವಾಯಿತು. ಕೋವಿಡ್​-19 ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದಾಗ ಚನು ಪಟಿಯಾಲಾದ ರಾಷ್ಟ್ರೀಯ ಕ್ರೀಡಾ ಸಂಸ್ಥೆಗೆ (ಎನ್‌ಐಎಸ್) ಸೀಮಿತವಾಗಿದ್ದರು.

ತನ್ನ ಕೋಣೆಯೊಳಗೆ ಉಳಿದು ತಿಂಗಳುಗಳ ನಂತರ ತರಬೇತಿ ಪುನರಾರಂಭಿಸಿದ ಚನು, ಭುಜದ ಸಮಸ್ಯೆ ಎದುರಿಸಲಾರಂಭಿಸಿದರು. ಇದು ವೇಟ್‌ಲಿಫ್ಟಿಂಗ್‌ನಲ್ಲಿನ ಎರಡು ಘಟನೆಗಳಲ್ಲಿ ಒಂದಾದ ಸ್ನ್ಯಾಚ್‌ನಲ್ಲಿನ ಅವರ ಕಾರ್ಯಕ್ಷಮತೆಯ ಮೇಲೆ ತೀವ್ರವಾಗಿ ಪರಿಣಾಮ ಬೀರಿತು. ಅದನ್ನು ಸರಿಪಡಿಸಲು, ಅವರು ಕಳೆದ ವರ್ಷ ಚಿಕಿತ್ಸೆ ಪಡೆಯಲು ಯುಎಸ್​ಗೆ ಹಾರಿದರು.

ಟೋಕಿಯೋ ಕ್ರೀಡಾಕೂಟದಲ್ಲಿ 26 ವರ್ಷದ ಮಹಿಳಾ 49 ಕೆಜಿ ವೇಟ್​ ಲಿಫ್ಟಿಂಗ್ ವಿಭಾಗದಲ್ಲಿ ಎರಡನೇ ಶ್ರೇಣಿ ಪಡೆದ ಮೀರಾಬಾಯಿ ಚನು 110 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮಣಿಪುರ ಮೂಲದವರಾದ ಇವರು ಒಟ್ಟು 202 ಕೆಜಿ ಭಾರ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಎತ್ತಿದ್ದಾರೆ (ಸ್ನ್ಯಾಚ್​​ನಲ್ಲಿ 87 ಕೆಜಿ ಮತ್ತು ಕ್ಲೀನ್ ಅಂಡ್​ ಜರ್ಕ್​ನಲ್ಲಿ 115).

ಇದನ್ನೂ ಓದಿ:ತವರು ರಾಜ್ಯಕ್ಕೆ ಮರಳಿದ ಮೀರಾಬಾಯಿ: ಒಲಿಂಪಿಕ್ಸ್‌ ಸಾಧಕಿಯ ನೋಡಲು ಜನವೋ ಜನ..

ABOUT THE AUTHOR

...view details