ಟೋಕಿಯೋ (ಜಪಾನ್) :ಟೋಕಿಯೋ ಒಲಿಂಪಿಕ್ಸ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ವಿಶ್ವ ಕಂಡ ಅತ್ಯುತ್ತಮ ಅಥ್ಲೀಟ್ ಮಿಲ್ಖಾ ಸಿಂಗ್ ಕನಸನ್ನು ನನಸು ಮಾಡಿದ್ದಾರೆ. ‘ದಿ ಫ್ಲೈಯಿಂಗ್ ಸಿಖ್’ ಎಂದೇ ಖ್ಯಾತಿಪಡೆದಿದ್ದ ಮಿಲ್ಖಾ ಸಿಂಗ್ ಅವರಿಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲಬೇಕೆಂಬ ಬಹುದೊಡ್ಡ ಕನಸಿತ್ತು. ಅದು ಈಗ ನೀರಜ್ ಚೋಪ್ರಾ ಮೂಲಕ ನಿಜವಾಗಿದೆ.
ಒಲಿಂಪಿಕ್ಸ್ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ, ಶತಕೋಟಿ ಭಾರತೀಯರ ಮಾತ್ರವಲ್ಲ, ಮಿಲ್ಖಾ ಸಿಂಗ್ ಅವರ ಕೊನೆಯ ಆಸೆಯನ್ನು ಸಹ ಈಡೇರಿಸಿದ್ದಾರೆ. ಅಲ್ಲದೇ ತಮ್ಮ ಈ ಐತಿಹಾಸಿಕ ಸಾಧನೆಯನ್ನು ನೀರಜ್, ಮಿಲ್ಖಾ ಸಿಂಗ್ ಅವರಿಗೆ ಅರ್ಪಿಸಿದ್ದಾರೆ.
ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಭಾರತದ ಸ್ಪರ್ಧಿಯೊಬ್ಬರು ಚಿನ್ನದ ಪದಕ ಗೆಲ್ಲುವುದು ಮಿಲ್ಖಾ ಸಿಂಗ್ ಅವರ ಕನಸಾಗಿತ್ತು. ಆದರೆ, ಸಾಯುವವರೆಗೂ ಆ ಆಸೆ ಈಡೇರಲಿಲ್ಲ. ಇದೀಗ ಟೋಕಿಯೊ ಒಲಿಂಪಿಕ್ಸ್ನಲ್ಲಿ ಮಿಲ್ಖಾ ಸಿಂಗ್ ಆಸೆ ಈಡೇರಿದ್ದರೂ, ಅದನ್ನು ಕಣ್ತುಂಬಿಕೊಳ್ಳಲು ಅವರು ನಮ್ಮೊಂದಿಗಿಲ್ಲ.
ಒಲಿಂಪಿಕ್ಸ್ ಗೇಮ್ಸ್ನಲ್ಲಿ ಶೂಟಿಂಗ್ ವಿಭಾಗದಲ್ಲಿ ಅಭಿನವ್ ಬಿಂದ್ರಾ ನಂತರ ಚಿನ್ನದ ಪದಕ ಗೆದ್ದ ಹಿರಿಮೆ ನೀರಜ್ ಚೋಪ್ರಾಗೆ ಸಲ್ಲುತ್ತದೆ. ಭಾರತ ಸ್ವಾತಂತ್ರ್ಯಗೊಂಡ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ನೀರಜ್ ಚೋಪ್ರಾ ಮೊದಲ ಪದಕ ಗೆದ್ದು ಕೊಟ್ಟಿದ್ದಾರೆ.
ಓದಿ:ಚಿನ್ನದ ಪದಕವನ್ನು ತಲೆದಿಂಬಿನ ಪಕ್ಕದಲ್ಲಿಟ್ಟುಕೊಂಡೇ ನಿದ್ರಿಸಿದೆ: ನೀರಜ್ ಚೋಪ್ರಾ