ಮೋನ್ಟ್ರಿಯಲ್( ಕೆನಡಾ) :ಪಂದ್ಯ ಆಡುವಾಗ ಗಾಯಗೊಂಡಿದ್ದ ಮಹಿಳಾ ಬಾಕ್ಸರ್ ಐದು ದಿನಗಳ ನಂತರ ಸಾವನ್ನಪ್ಪಿರುವ ಘಟನೆ ಕೆನಡಾದ ಮೋನ್ಟ್ರಿಯಲ್ನಲ್ಲಿ ನಡೆದಿದೆ. ಮೆಕ್ಸಿಕನ್ ಮಹಿಳಾ ಬಾಕ್ಸರ್ ಜಾನೆಟ್ ಜಕಾರಿಯಾಸ್ ಜಪಾಟಾ ಸಾವನ್ನಪ್ಪಿರುವ ಮಹಿಳಾ ಬಾಕ್ಸರ್.
ಶನಿವಾರ ರಾತ್ರಿ ಐಜಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 18 ವರ್ಷದ ಜಪಾಟಾ ತೀವ್ರವಾಗಿ ಗಾಯಗೊಂಡಿದ್ದರು. ಇವರು ಮೇರಿ-ಪಿಯರೆ ಜೊತೆಯ ಪಂದ್ಯದಲ್ಲಿ ಮೇರಿ ನೀಡಿದ್ದ ಬಲವಾದ ಪಂಚ್ನಿಂದ ಜಪಾಟ ಗಾಯಗೊಂಡು ರಿಂಗ್ನಲ್ಲಿಯೇ ಕುಸಿದು ಬಿದ್ದಿದ್ದರು.