ಟೋಕಿಯೋ(ಜಪಾನ್):ಭಾರತದ ಟೇಕ್ವಾಂಡೋ ಆಟಗಾರ್ತಿ ಅರುಣಾ ತನ್ವಾರ್ ಟೋಕಿಯೋ ಪ್ಯಾರಾಲಿಂಪಿಕ್ಸ್ನ ಮಹಿಳೆಯರ K44-49ಕೆ.ಜಿ ವಿಭಾಗದ ರೇಪ್ಚೇಜ್ ಸುತ್ತಿನ ಕ್ವಾರ್ಟರ್ ಫೈನಲ್ನಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ.
ಅರುಣಾ ತನ್ವಾರ್ ಗಾಯದ ಸಮಸ್ಯೆಯಿಂದ ಹೊರಗೆ ಉಳಿದಿರುವುದಾಗಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮೀಡಿಯಾ (SAI Media) ಟ್ವೀಟ್ ಮಾಡಿ ದೃಢಪಡಿಸಿದೆ. ಜೊತೆಗೆ ಆಕೆ ಶೀಘ್ರವಾಗಿ ಚೇತರಿಸಿಕೊಳ್ಳಲಿ, ಮುಂದಿನ ಸ್ಪರ್ಧೆಗಳಿಗೆ ಶುಭವಾಗಲಿ ಎಂದು ಹಾರೈಸಿದೆ.
ಆಕೆ ಗಾಯಗೊಂಡಿರುವುದು ದೃಢಪಟ್ಟ ನಂತರ, ಆಕೆ ಪೂರ್ಣವಾಗಿ ಚೇತರಿಕೆ ಕಾಣುವವರೆಗೆ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ ಎಂದು ವೈದ್ಯಕೀಯ ಅಧಿಕಾರಿ ಸೂಚಿಸಿದ್ದಾರೆ. ಈಗ ಸದ್ಯಕ್ಕೆ ಅರುಣಾ ಅವರನ್ನು ಪಾಲಿಕ್ಲಿನಿಕ್ಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಅಝರ್ಬೈಜನ್ನ ರೊಯಲಾ ಫತಲಿಯೆವಾ ಅವರೊಂದಿಗೆ ಅರುಣಾ ತನ್ವಾರ್ ಸೆಣಸಬೇಕಿತ್ತು. ಈಗ ಗಾಯದ ಸಮಸ್ಯೆಯಿಂದ ಅರುಣಾ ಹೊರಗುಳಿದ ಕಾರಣದಿಂದ ರೊಯಲಾ ಫತಲಿಯೆವಾ ಅವರನ್ನು ಜಯಶಾಲಿ ಎಂದು ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Tokyo Paralympics ಟೇಕ್ವಾಂಡೋ: ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡ ಅರುಣಾ ತನ್ವಾರ್