ಕರ್ನಾಟಕ

karnataka

ETV Bharat / sports

ಭಾರತದ ಟೋಕಿಯೋ ಒಲಿಂಪಿಕ್ಸ್​​ ಪದಕ ವಿಜೇತರಿಗೆ ಇಂದು ಸನ್ಮಾನ - India's Tokyo Olympic Medalists

ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಇಂದು ಸಂಜೆ ಟೋಕಿಯೋ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಪದಕ ಗೆದ್ದವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

India's Tokyo Olympic  Medalists To Be Felicitated By Sports Authority Of India On August 9
ಭಾರತದ ಟೋಕಿಯೋ ಒಲಿಂಪಿಕ್ಸ್​​ ಪದಕ ವಿಜೇತರಿಗೆ ಇಂದು ಸನ್ಮಾನ

By

Published : Aug 9, 2021, 3:15 PM IST

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ 2020 ಕ್ರೀಡಾಕೂಟದಲ್ಲಿ ಪದಕ ಗೆದ್ದ ಎಲ್ಲ ಕ್ರೀಡಾಪಟುಗಳಿಗೆ ಇಂದು ಸಂಜೆ 6.30ಕ್ಕೆ ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಗೌರವಿಸಲಿದೆ.

ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಮಾಜಿ ಒಲಿಂಪಿಕ್ಸ್​​ ಆಟಗಾರರು ಮತ್ತು ಭಾರತ ಸರ್ಕಾರದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ವಿಡಿಯೋ ಕಾನ್ಫರೆನ್ಸ್​ ಮೂಲಕ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಈ ಬಾರಿಯ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಸೇರಿ ಒಟ್ಟು 7 ಪದಕ ಬಂದಿದೆ. ಈ ಮೂಲಕ ಅತಿ ಹೆಚ್ಚು ಪದಕ ಗೆದ್ದು ಭಾರತ ಒಲಿಂಪಿಕ್ಸ್​ ಇತಿಹಾಸದಲ್ಲೇ ಹೊಸದೊಂದು ದಾಖಲೆ ನಿರ್ಮಿಸಿದೆ. ಜೊತೆಗೆ ಒಲಿಂಪಿಕ್ಸ್ ಪಾಯಿಂಟ್ ಪಟ್ಟಿಯಲ್ಲಿ ಭಾರತ 47ನೇ ಸ್ಥಾನದಲ್ಲಿದೆ.

ಭಾರತದ ಪದಕ ವಿಜೇತರಿವರು

  • ನೀರಜ್​ ಚೋಪ್ರಾ - ಜಾವಲಿನ್ ಥ್ರೋ - ಚಿನ್ನ
  • ರವಿ ಕುಮಾರ್ ದಹಿಯಾ - ಕುಸ್ತಿ -ಬೆಳ್ಳಿ
  • ಮೀರಾಬಾಯಿ ಚನು - ವೇಟ್ ಲಿಫ್ಟಿಂಗ್ - ಬೆಳ್ಳಿ
  • ಪಿವಿ ಸಿಂಧು - ಬ್ಯಾಡ್ಮಿಂಟನ್‌ - ಕಂಚು
  • ಭಜರಂಗ್ ಪೂನಿಯಾ- ಕುಸ್ತಿ - ಕಂಚು
  • ಲವ್ಲಿನಾ - ಬಾಕ್ಸಿಂಗ್‌ - ಕಂಚು
  • ಪುರುಷರ ಹಾಕಿ ತಂಡ - ಕಂಚು

ABOUT THE AUTHOR

...view details