ಕರ್ನಾಟಕ

karnataka

ETV Bharat / sports

ಚಿನ್ನದ ಬೆಳಕಿನಲ್ಲಿ ಭಾರತ ಬೆಳಗಿದ ನೀರಜ್ ಚೋಪ್ರಾಗೆ ಮತ್ತೊಂದು ಸಿಹಿ ಸುದ್ದಿ! - Neeraj Chopra

ಟೋಕಿಯೊ ಒಲಿಂಪಿಕ್ಸ್​ ಜಾವೆಲಿನ್​ ಥ್ರೋ ವಿಭಾಗದಲ್ಲಿ ಭಾರತದ ನೀರಜ್​​ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇದೀಗ ವಿಶ್ವ ಅಥ್ಲೆಟಿಕ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಅವರ ಹೆಸರಿದ್ದು, ವಿಶ್ವದಲ್ಲೇ ಎರಡನೇ ಸ್ಥಾನ ಅಲಂಕರಿಸಿದ್ದಾರೆ.

ನೀರಜ್ ಚೋಪ್ರಾ
ನೀರಜ್ ಚೋಪ್ರಾ

By

Published : Aug 12, 2021, 11:05 AM IST

ನವದೆಹಲಿ: ಹೊಸ ವಿಶ್ವ ಅಥ್ಲೆಟಿಕ್ಸ್ ರ‍್ಯಾಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಟೋಕಿಯೊ ಒಲಿಂಪಿಕ್ಸ್​ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ನೀರಜ್, 1315 ಅಂಕಗಳನ್ನು ಪಡೆದು ವಿಶ್ವ ಅಥ್ಲೆಟಿಕ್ಸ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಜರ್ಮನಿಯ ಜೊಹಾನ್ಸ್ ವೆಟರ್ 1396 ಅಂಕ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಪೋಲೆಂಡ್‌ನ ಮಾರ್ಸಿನ್ ಕ್ರುಕೋವ್ಸ್ಕಿ ಮೂರನೇ ಸ್ಥಾನದಲ್ಲಿದ್ದು, ಜೆಕ್ ಗಣರಾಜ್ಯದ ಜಾಕೂಬ್ ವಾಡ್ಲೆಜ್ಚ್ ನಾಲ್ಕನೇ ಸ್ಥಾನ ಮತ್ತು ಜರ್ಮನಿಯ ಜೂಲಿಯನ್ ವೆಬರ್ ಹೆಸರು ಅಥ್ಲೆಟಿಕ್ಸ್ ರ‍್ಯಾಕಿಂಗ್​ನಲ್ಲಿ ಐದನೇ ಸ್ಥಾನದಲ್ಲಿದೆ.

23 ವರ್ಷದ ನೀರಜ್ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಹಾಗೂ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಎಸೆದರು. ಆದರೆ ಮೂರನೇ ಪ್ರಯತ್ನ 76.79 ಮೀ.ಗಿಂತ ಕಡಿಮೆ ಎಸೆದಿದ್ದರು. ಇನ್ನು ಎರಡನೇ ಪ್ರಯತ್ನದಲ್ಲಿ ಎಲ್ಲರಿಗಿಂತಲೂ ಹೆಚ್ಚು ದೂರ ಬರ್ಚಿಯನ್ನು ಎಸೆದಿದ್ದರಿಂದ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. 2018ರ ಏಷ್ಯನ್ ಗೇಮ್ಸ್​ನಲ್ಲಿಯೂ ನೀರಜ್​ ಚಿನ್ನದ ಸಾಧನೆ ಮಾಡಿದ್ದರು.

ABOUT THE AUTHOR

...view details