ಟೋಕಿಯೋ:ಒಲಿಂಪಿಕ್ಸ್ ಮಹಿಳಾ ಜಾವೆಲಿನ್ ಎಸೆತ ಎ ವಿಭಾಗದ ಕ್ಯಾಲಿಫೈರ್ ಪಂದ್ಯದಲ್ಲಿ ಭಾರತದ ಅನುರಾಣಿಗೆ ಹಿನ್ನಡೆಯಾಗಿದೆ. ಈ ಮೂಲಕ ಫೈನಲ್ ಪ್ರವೇಶಿಸುವ ಅವರ ಪ್ರಯತ್ನ ವಿಫಲಗೊಂಡಿದೆ.
ಅನುರಾಣಿ 2019 ರಲ್ಲಿ ಪಟಿಯಾಲದಲ್ಲಿ ನಡೆದ ಫೆಡರೇಶನ್ ಕಪ್ ಕ್ರೀಡಾಕೂಟದಲ್ಲಿ 62.34 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದರು. 2014 ರಲ್ಲಿ ದಕ್ಷಿಣ ಕೊರಿಯಾದ ಇಂಚಿಯಾನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಪಡೆದಿದ್ದರು. ಒಲಿಂಪಿಕ್ಸ್ನಲ್ಲಿ ಪದಕಕ್ಕಾಗಿ ಪರಿಶ್ರಮ ಪಟ್ಟರೂ ಅವರಿಗೆ ಗುರಿಮುಟ್ಟಲು ಸಾಧ್ಯವಾಗಲಿಲ್ಲ.
ಓದಿ: Tokyo Olympics: ಇಂದು ಪುರುಷರ ಹಾಕಿ ಸೆಮೀಸ್ ಸೇರಿ ಈ ಎಲ್ಲ ಭಾರತೀಯರು ಕಣಕ್ಕೆ
ಗ್ರೂಪ್ ಎ ಕ್ವಾಲಿಫೈರ್ ಪಂದ್ಯದಲ್ಲಿ 65.24 ಮೀಟರ್ ದೂರಕ್ಕೆ ಎಸೆಯುವ ಮೂಲಕ ಪೋಲೆಂಡ್‌ನ ಮಾರಿಯಾ ಆಂಡ್ರೆಜಿಕ್ ಅಗ್ರಸ್ಥಾನವನ್ನು ಪಡೆದರು. ಈ ಪಂದ್ಯದಲ್ಲಿ ಅನುರಾಣಿಯ ಅತ್ಯುತ್ತಮ ಕೊನೆಯ ಎಸೆತದ ದೂರ 54.04 ಕ್ಕೆ ಆಗಿತ್ತು.