ಕರ್ನಾಟಕ

karnataka

ETV Bharat / sports

ಒಲಿಂಪಿಕ್ಸ್​ ಇತಿಹಾಸದಲ್ಲೇ ಮೊದಲ ಸಲ ನಾಕೌಟ್​​​ ಹಂತಕ್ಕೆ ತಲುಪಿದ ಭಾರತದ ಮಹಿಳಾ ಹಾಕಿ ತಂಡ - ಗ್ರೇಟ್​ ಬ್ರಿಟನ್ ಹಾಕಿ ತಂಡ

ಗ್ರೂಪ್​ ಹಂತದ ಮಹಿಳಾ ಹಾಕಿ ಪಂದ್ಯದಲ್ಲಿ ಗ್ರೇಟ್​ ಬ್ರಿಟನ್​ ತಂಡದ ಗೆಲುವು ಭಾರತಕ್ಕೆ ವರವಾಗಿದ್ದು, ಈ ಮೂಲಕ ಟೋಕಿಯೋ ಒಲಿಂಪಿಕ್ಸ್​ನಲ್ಲಿ ನಾಕೌಟ್ ಹಂತಕ್ಕೆ ರಾಣಿ ರಾಂಪಾಲ್ ನೇತೃತ್ವದ ಮಹಿಳಾ ಹಾಕಿ ತಂಡ ಲಗ್ಗೆ ಹಾಕಿದೆ.

Indian Women's Hockey Team
Indian Women's Hockey Team

By

Published : Jul 31, 2021, 7:37 PM IST

ಟೋಕಿಯೋ:ಮಹತ್ವದ ಹಾಕಿ ಪಂದ್ಯವೊಂದರಲ್ಲಿ ಐರ್ಲೆಂಡ್​ ವಿರುದ್ಧ ಗ್ರೇಟ್​ ಬ್ರಿಟನ್​ ಮಹಿಳಾ ಹಾಕಿ ತಂಡ ಗೆಲುವು ದಾಖಲು ಮಾಡಿದ್ದು, ಇದು ಭಾರತಕ್ಕೆ ವರವಾಗಿ ಪರಿಣಮಿಸಿದೆ. ಹೀಗಾಗಿ 4ನೇ ತಂಡವಾಗಿ ಭಾರತದ ಮಹಿಳಾ ಹಾಕಿ ತಂಡ ಇದೀಗ ಕ್ವಾರ್ಟರ್​​ ಫೈನಲ್​ಗೆ ಲಗ್ಗೆ ಹಾಕಿದೆ. ಈ ಮೂಲಕ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ.

ಐರ್ಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಗ್ರೇಟ್​ ಬ್ರಿಟನ್​​​ 2-0 ಅಂತರದಿಂದ ಗೆಲುವು ದಾಖಲು ಮಾಡಿದೆ. ಇದಕ್ಕೂ ಮೊದಲು ನಡೆದಿದ್ದ ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಭಾರತ ಮಹಿಳಾ ತಂಡ 4-3 ಅಂತರದಿಂದ ಗೆಲುವು ದಾಖಲು ಮಾಡಿ ಕ್ವಾರ್ಟರ್​ಫೈನಲ್​ ಆಸೆ ಜೀವಂತವಾಗಿಟ್ಟುಕೊಂಡಿತ್ತು. ಈ ಪಂದ್ಯದಲ್ಲಿ ಭಾರತದ ಪರ ವಂದನಾ ಕಟಾರಿಯಾ ಮೂರು ಗೋಲು​ ಹಾಗೂ ನೇಹಾ ಒಂದು ಗೋಲ್​ ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದರು.

ಇದನ್ನೂ ಓದಿರಿ: ಪದಕ ರಹಿತವಾಗಿ ಬಂದಿದ್ದಕ್ಕೆ ಕ್ಷಮೆ ಕೋರುವೆ: ಒಲಿಂಪಿಕ್ಸ್​​ನಲ್ಲಿ ನನಗೆ 'ಮಹಾಮೋಸ' ಎಂದ ಮೇರಿ ಕೋಮ್​!

ಗ್ರೂಪ್​ ‘ಎ’ ವಿಭಾಗದಲ್ಲಿ ಭಾರತ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೊದಲೆರಡು ಪಂದ್ಯಗಳಲ್ಲಿ ಸೋತು ನಂತರದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿತ್ತು. ಹೀಗಾಗಿ ಕ್ವಾರ್ಟರ್​​ಫೈನಲ್​ ಆಸೆ ಜೀವಂತವಾಗಿಟ್ಟುಕೊಂಡಿತು.

ಇದೀಗ ಗ್ರೇಟ್​ ಬ್ರಿಟನ್​ ಗೆಲುವು ದಾಖಲು ಮಾಡಿರುವ ಕಾರಣ ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತ ಮಹಿಳಾ ಹಾಕಿ ತಂಡವು ಮೊದಲ ಬಾರಿಗೆ ನಾಕೌಟ್‌ ಪ್ರವೇಶಿಸಿರುವ ಸಾಧನೆ ಮಾಡಿದೆ. ಕ್ವಾರ್ಟರ್​​ ಫೈನಲ್​ನ ಮೊದಲ ಪಂದ್ಯದಲ್ಲಿ ರಾಣಿ ರಾಂಪಾಲ್​ ನೇತೃತ್ವದ ಭಾರತದ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ.

ಒಲಿಂಪಿಕ್ಸ್​ನಲ್ಲಿ ಹ್ಯಾಟ್ರಿಕ್​ ಗೋಲು ಗಳಿಸಿದ ಮೊದಲ ಭಾರತೀಯ ಆಟಗಾರ್ತಿ

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಆಟಗಾರ್ತಿ ವಂದನಾ ಕಟಾರಿಯಾ ಹ್ಯಾಟ್ರಿಕ್​ ಗೋಲು ಗಳಿಸುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ. ಈ ಮೂಲಕ ಒಲಿಂಪಿಕ್ಸ್​ನಲ್ಲಿ ಹ್ಯಾಟ್ರಿಕ್​ ಗೋಲು ಗಳಿಸಿರುವ ಭಾರತದ ಮೊದಲ ಆಟಗಾರ್ತಿ ಆಗಿ ಹೊರಹೊಮ್ಮಿದ್ದಾರೆ.

ABOUT THE AUTHOR

...view details