ಕರ್ನಾಟಕ

karnataka

ETV Bharat / sports

Tokyo Olympics: ಟೇಬಲ್‌ ಟೆನ್ನಿಸ್‌ನಲ್ಲಿ ನಿರಾಶೆ ಮೂಡಿಸಿದ ಬಾತ್ರ; ಭಾರತದ ಹೋರಾಟ ಅಂತ್ಯ - ಒಲಿಂಪಿಕ್ಸ್‌

ಟೇಬಲ್‌ ಟೆನ್ನಿಸ್‌ ಮಹಿಳಾ ಸಿಂಗಲ್ಸ್‌ ವಿಭಾಗದ 3ನೇ ಸುತ್ತಿನಲ್ಲಿ ಭಾರತದ ಮನಿಕಾ ಬಾತ್ರ ಆಸ್ಟ್ರೇಲಿಯಾದ ಸೋಫಿಯಾ ವಿರುದ್ಧ 4-0 ನೇರ ಸೆಟ್‌ಗಳಿಂದ ಪರಾಭವಗೊಂಡು ನಿರಾಸೆ ಮೂಡಿಸಿದರು.

Indian table tennis player Manika Batra loses to Austria's Sofia Polcanova 0-4 in Round 3 clash of women's singles
ಟೋಕಿಯೋ ಒಲಿಂಪಿಕ್ಸ್‌: 3ನೇ ಸುತ್ತಿನಲ್ಲಿ ಭಾರತದ ತಾರಾ ಆಟಗಾರ್ತಿ ಮನಿಕಾ ಬಾತ್ರಗೆ ನಿರಾಸೆ

By

Published : Jul 26, 2021, 3:15 PM IST

ಟೋಕಿಯೋ(ಜಪಾನ್‌): ಒಲಿಂಪಿಕ್ಸ್‌ನ ಟೇಬಲ್‌ ಟೆನ್ನಿಸ್‌ ಮಹಿಳಾ ಸಿಂಗಲ್ಸ್‌ನಲ್ಲಿ ಭರವಸೆ ಮೂಡಿಸಿದ್ದ ಭಾರತದ ತಾರಾ ಆಟಗಾರ್ತಿ ಮನಿಕಾ ಬಾತ್ರ 3ನೇ ಸುತ್ತಿನ ಪಂದ್ಯದಲ್ಲಿ ಸೋಲು ಅನುಭವಿಸಿದರು. ಆಸ್ಟ್ರೇಲಿಯಾದ ಸೋಫಿಯಾ ಪೋಲ್ಕನೋವ ವಿರುದ್ಧ ಅವರು 4-0 (11-8, 11-2, 11-5, 11-7) ಅಂತರದ ನೇರ ಸೆಟ್‌ಗಳಿಂದ ನಿರಾಶೆ ಮೂಡಿಸಿದ್ದಾರೆ.

ಒಲಿಂಪಿಕ್ಸ್‌ನ ಟೇಬಲ್‌ ಟೆನ್ನಿಸ್‌ನಲ್ಲಿ 3ನೇ ಸುತ್ತಿಗೆ ಪ್ರವೇಶ ಪಡೆದಿದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಮನಿಕಾ ಬಾತ್ರ ಭಾಜನರಾಗಿದ್ದರು. ಬಾತ್ರ ಅವರು ಈ ಹಿಂದಿನ ಮೊದಲ ಸುತ್ತಿನ ಪಂದ್ಯದಲ್ಲಿ ಬ್ರಿಟನ್​ನ ಟಿನ್ ಟಿನ್ ಹೋ ಅವರನ್ನು 4-0ಯಲ್ಲಿ ಗೆಲುವು ಸಾಧಿಸಿ 2ನೇ ಸುತ್ತಿಗೆ ಪ್ರವೇಶ ಪಡೆದಿದ್ದರು.

26 ವರ್ಷದ ಟೇಬಲ್‌ ಟೆನ್ನಿಸ್‌ ತಾರೆ, ವಿಶ್ವ ಶ್ರೇಯಾಂಕದಲ್ಲಿ 63ನೇ ಸ್ಥಾನದಲ್ಲಿದ್ದಾರೆ. 2020ರಲ್ಲಿ ಇವರಿಗೆ ಭಾರತ ಸರ್ಕಾರ ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇದನ್ನೂ ಓದಿ: Olympics: ಸಿಂಗಲ್ಸ್​ ಟೇಬಲ್​ ಟೆನಿಸ್​ನಲ್ಲಿ ಶುಭಾರಂಭ ಮಾಡಿದ ಸುತಿರ್ಥ, ಮನಿಕಾ

1995ರ ಜೂನ್‌ 15 ರಂದು ದೆಹಲಿಯಲ್ಲಿ ಜನಿಸಿದ್ದ ಮನಿಕಾ, 2018ರ ಕಾಮನಲ್‌ವೆಲ್ತ್‌ ಗೇಮ್‌ನ ಮಿಕ್ಸ್ಡ್‌ ಡಬಲ್ಸ್‌, ಮಹಿಳಾ ಡಬಲ್ಸ್‌, ಮಹಿಳಾ ಸಿಂಗಲ್ಸ್‌ ಹಾಗೂ 2018ರ ಏಷ್ಯನ್‌ ಗೇಮ್‌ನ ಮಿಕ್ಸ್ಡ್‌ ಡಬಲ್ಸ್‌ನಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details