ಟೋಕಿಯೋ(ಜಪಾನ್): ಒಲಿಂಪಿಕ್ಸ್ ಮಹಿಳಾ ವಿಭಾಗದ ಬಾಕ್ಸಿಂಗ್ನಲ್ಲಿ ಚಿನ್ನದ ಪದಕ ಪಡೆಯಲು ಹೋರಾಡುತ್ತಿದ್ದ ಭಾರತದ ಲವ್ಲಿನಾ ಬೋರ್ಗಹೈನ್ ಅವರಿಗೆ ಕಂಚಿನ ಪದಕ ಒಲಿದಿದೆ. ಟರ್ಕಿ ಸ್ಪರ್ಧಿಯ ವಿರುದ್ಧ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಅವರು ಸೋಲು ಅನುಭವಿಸಿದ್ದಾರೆ.
ಮೋದಿ ಮೆಚ್ಚುಗೆಯ ಟ್ವೀಟ್:

ಟರ್ಕಿಯ ಬುಸೆನಾಜ್ ಸುರ್ಮನೆಲಿ ಅವರ ವಿರುದ್ಧ 64-69 ಕೆಜಿ ವಿಭಾಗದಲ್ಲಿ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಿದ್ದ ಲವ್ಲಿನಾ 0-5 ಅಂಕಗಳಿಂದ ಪರಾಭವಗೊಂಡರು. ಇದರಿಂದ ಕಂಚಿನ ಪದಕಕ್ಕೆ ಅವರು ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕೇಂದ್ರ ಕ್ರೀಡಾ ಸಚಿವರಿಂದ ಪ್ರಶಂಸೆ:
ಈವರೆಗಿನ ಒಲಿಂಪಿಕ್ ಬಾಕ್ಸಿಂಗ್ ಇತಿಹಾಸದಲ್ಲಿ ಮೂರನೇ ಪದಕ ಇದಾಗಿದ್ದು, ಇದಕ್ಕೂ ಮೊದಲು ಮೇರಿ ಕೋಮ್ ಮತ್ತು ವಿಜೇಂದರ್ ಸಿಂಗ್ ಪದಕಗಳನ್ನು ಗೆದ್ದಿದ್ದರು. ಈಗ ಭಾರತದ ಕುಸ್ತಿಪಟುಗಳಾದ ರವಿಕುಮಾರ್ ದಹಿಯಾ ಮತ್ತು ದೀಪಕ್ ಪೂನಿಯಾ ಅವರ ಸೆಮಿಫೈನಲ್ ಸ್ಪರ್ಧೆಗಳು ನಡೆಯಲಿದ್ದು, ಪದಕದ ಮೇಲೆ ಭಾರತೀಯ ಜನತೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.