ಟೋಕಿಯೋ:ಒಲಿಂಪಿಕ್ಸ್ನಲ್ಲಿ ಈಗಾಗಲೇ ಭಾರತಕ್ಕೆ ಇನ್ನೊಂದು ಪದಕ ಖಚಿತ ಪಡಿಸಿರುವ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ನಾಳೆ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ, ವಿಶ್ವ ಚಾಂಪಿಯನ್ ಬಾಕ್ಸರ್ ಟರ್ಕಿಯ ಬುಸೆನಾಜ್ ಸುರಮೆನೆಲ್ಲಿ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.
69 ಕೆಜಿ ವಿಭಾಗದ ಪಂದ್ಯದಲ್ಲಿ ಈಗಾಗಲೇ ಸಮಿಫೈನಲ್ಗೆ ಲಗ್ಗೆ ಹಾಕಿರುವ ಲವ್ಲಿನಾ ಗೆಲುವು ದಾಖಲೆ ಮಾಡಿದರೆ ಹೊಸ ಇತಿಹಾಸ ರಚನೆಯಾಗಲಿದ್ದು, ಅದಕ್ಕಾಗಿ ಬಾಕ್ಸರ್ ಪ್ರಯತ್ನ ಮಾಡಲಿದ್ದಾರೆ. 23 ವರ್ಷದ ಲವ್ಲಿನಾಗೂ ಮೊದಲು 2008ರಲ್ಲಿ ವಿಜೇಂದರ್ ಸಿಂಗ್ ಹಾಗೂ 2012ರಲ್ಲಿ ಮೇರಿಕೋಮ್ ಬಾಕ್ಸಿಂಗ್ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಆದರೆ, ಇದೀಗ ಸೆಮಿಫೈನಲ್ನಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ ಬೆಳ್ಳಿ ಅಥವಾ ಚಿನ್ನದ ಪದಕ ತಂದುಕೊಡುವ ಇರಾದೆ ಇಟ್ಟುಕೊಂಡಿದ್ದಾರೆ. ಬೆಳ್ಳಿ ಅಥವಾ ಚಿನ್ನದ ಪದಕ ಗೆದ್ದರೆ ಈ ಸಾಧನೆ ಮಾಡುವ ಮೊದಲ ಭಾರತದ ಬಾಕ್ಸರ್ ಎಂಬ ಸಾಧನೆ ಕೂಡ ಮಾಡಲಿದ್ದಾರೆ.