ಟೋಕಿಯೋ: ಭಾರತ ವನಿತೆಯರ ಹಾಕಿ ತಂಡ ಅರ್ಜೆಂಟೀನಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 1-2ರಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸುವ ಕನಸು ಕೂಡ ನುಚ್ಚುನೂರಾಗಿದೆ. ಆದರೆ, ಕಂಚಿನ ಪದಕ ಗೆಲ್ಲುವ ಅವಕಾಶವಿದ್ದು, ಶುಕ್ರವಾರ ನಡೆಯುವ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ.
ಬುಧವಾರ ಪಂದ್ಯ ಆರಂಭವಾದ ಕೇವಲ 2ನೇ ನಿಮಿಷದಲ್ಲಿ ಗುರ್ಜೀತ್ ಕೌರ್ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ ಮುನ್ನಡೆ ದೊರೆಕಿಸಿಕೊಟ್ಟರು. ಆದರೆ, ಅರ್ಜೆಂಟೀನಾದ ನೋಯೆಲ್ ಬ್ಯಾರಿಯೊನೊವೊ ಎರಡು ಪೆನಾಲ್ಟಿ ಕಾರ್ನರ್ಗಳನ್ನು ಗೋಲಾಗಿ ಪರಿವರ್ತಿಸಿ ತಂಡ 3ನೇ ಬಾರಿಗೆ ಫೈನಲ್ ಪ್ರವೇಶಿಸುವಂತೆ ಮಾಡಿದರು.
ಅವರು 18ನೇ ನಿಮಿಷದಲ್ಲಿ ಮತ್ತು 36ನೇ ನಿಮಿಷದಲ್ಲಿ ನೋಯೆಲ್ ಸಿಕ್ಕಂತಹ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತದ ಫೈನಲ್ ಕನಸನ್ನು ನುಚ್ಚುನೂರು ಮಾಡಿದರು.