ಕರ್ನಾಟಕ

karnataka

ಟೋಕಿಯೋ ಒಲಿಂಪಿಕ್ಸ್‌ 2020: ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಜಯ... ಕ್ವಾರ್ಟರ್ ಫೈನಲ್​ಗೆ ಎಂಟ್ರಿ

By

Published : Jul 29, 2021, 8:24 AM IST

Updated : Jul 29, 2021, 9:50 AM IST

ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ಗೆ ತಲುಪಿದೆ.

India beat Argentina, India beat Argentina in Olympic men hockey,  India beat Argentina news, Tokyo Olympics 2020, Tokyo Olympics 2020 news, ಅರ್ಜೆಂಟೀನಾ ವಿರುದ್ಧ ಗೆದ್ದ ಭಾರತ, ಹಾಕಿಯಲ್ಲಿ ಅರ್ಜೆಂಟೀನಾ ವಿರುದ್ಧ ಗೆದ್ದ ಭಾರತ, ಅರ್ಜೆಂಟೀನಾ ವಿರುದ್ಧ ಗೆದ್ದ ಭಾರತ ಸುದ್ದಿ, ಟೋಕಿಯೋ ಒಲಂಪಿಕ್ಸ್​ 2020, ಟೋಕಿಯೋ ಒಲಂಪಿಕ್ಸ್​ 2020 ಸುದ್ದಿ,
ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಗೆದ್ದು ಕ್ವಾರ್ಟರ್​ಗೆ ಪ್ರವೇಶಿಸಿ ಭಾರತದ ಹಾಕಿ ತಂಡ

ಟೋಕಿಯೋ:ಗುರುವಾರ ನಡೆದ ತನ್ನ ಅಂತಿಮ ಪೂಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಭಾರತದ ಹಾಕಿ ತಂಡ 3-1 ಗೋಲುಗಳಿಂದ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್​​​ ಫೈನಲ್​ ತಲುಪಿದೆ.

ಭಾರತದ ಪರವಾಗಿ 43 ನೇ ನಿಮಿಷದಲ್ಲಿ ವರುಣ್ ಕುಮಾರ್ ಗೋಲ್​ ಬಾರಿಸಿದರು. ಬಳಿಕ ಪಂದ್ಯದ ಮುಕ್ತಾಯದ ನಿಮಿಷಗಳಲ್ಲಿ ವಿವೇಕ್ ಸಾಗರ್ ಪ್ರಸಾದ್ (58 ನೇ) ಮತ್ತು ಹರ್ಮನ್‌ಪ್ರೀತ್ ಸಿಂಗ್ (59 ನೇ) ಗೋಲು​ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

48 ನೇ ನಿಮಿಷದಲ್ಲಿ ಷುತ್ ಕ್ಯಾಸೆಲ್ಲಾ ಮಾಡಿದ ಪೆನಾಲ್ಟಿ ಕಾರ್ನರ್​ನಿಂದಾಗಿ ಅರ್ಜೆಂಟೀನಾಗೆ ಏಕೈಕ ಗೋಲು ಒಲಿಯಿತು. ಈ ಗೆಲುವಿನ ಮೂಲಕ ಭಾರತವು ‘ಎ’ ಪೂಲ್​ನಲ್ಲಿ ಎರಡನೇ ಸ್ಥಾನಕ್ಕೇರಿದೆ. ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ.

ಆರು ತಂಡಗಳ ಪೂಲ್‌ನಲ್ಲಿ ಅರ್ಜೆಂಟೀನಾ ಐದನೇ ಸ್ಥಾನದಲ್ಲಿದೆ. ಕ್ವಾರ್ಟರ್‌ಫೈನಲ್​​ನಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು ಶುಕ್ರವಾರ ನಡೆಯುವ ಅಂತಿಮ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​​​​ ವಿರುದ್ಧ ಅರ್ಜೆಂಟೀನಾ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಇದೆ. ಭಾರತ ಶುಕ್ರವಾರ ನಡೆಯಲಿರುವ ಅಂತಿಮ ಪೂಲ್ ಪಂದ್ಯದಲ್ಲಿ ಆತಿಥೇಯ ಜಪಾನ್ ವಿರುದ್ಧ ಸೆಣಸಲಿದೆ.

Last Updated : Jul 29, 2021, 9:50 AM IST

ABOUT THE AUTHOR

...view details