ಟೋಕಿಯೋ:ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಭರವಸೆಯ ಬಾಕ್ಸರ್ ಮೇರಿ ಕೋಮ್ 2-3 ಅಂತರದಿಂದ ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿದ್ದಾರೆ. ಇದೀಗ ಇದೇ ವಿಚಾರವಾಗಿ ತಮ್ಮ ಅಭಿಪ್ರಾಯ ಹೊರಹಾಕಿರುವ ಬಾಕ್ಸಿಂಗ್ ಚಾಂಪಿಯನ್ ಅಂಪೈರಿಂಗ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕೊಲಂಬಿಯಾ ಬಾಕ್ಸರ್ ಇಂಗ್ರಿಟ್ ವೇಲೆನ್ಸಿಯಾ ವಿರುದ್ಧ ಪ್ರೀ ಕ್ವಾರ್ಟರ್ನ ಮೊದಲ ರೌಂಡ್ನಲ್ಲಿ ಮೇರಿ ಕೋಮ್ 4-1 ಅಂತರದಿಂದ ಸೋಲು ಕಂಡಿದ್ದಾರೆ. ಆದರೆ 2ನೇ ರೌಂಡ್ನಲ್ಲಿ ಕಮ್ಬ್ಯಾಕ್ ಮಾಡಿ 3-2 ಅಂತರದಿಂದ ಗೆಲುವು ದಾಖಲಿದ್ದರು. ಇದಾದ ಬಳಿಕ ನಿರ್ಣಾಯಕ ರೌಂಡ್ನಲ್ಲಿ ಮೇರಿ ಕೋಮ್ ಎದುರಾಳಿಗೆ ಉತ್ತಮವಾದ ಪಂಚ್ ನೀಡಿದ್ದರಿಂದ ತಾನೇ ಗೆದ್ದಿದ್ದೇನೆಂದು ರಿಂಗ್ನಲ್ಲಿ ಸಂಭ್ರಮಿಸಿದ್ದರು. ಜೊತೆಗೆ ಕೈ ಮೇಲೆ ಎತ್ತಿ ತಮ್ಮ ಗೆಲುವಿನ ಸಂಭ್ರಮಾಚರಣೆ ಮಾಡಿದ್ದರು.
ಆದರೆ ಉದ್ದೀಪನ ಮದ್ದು ಸೇವನೆ ಪರೀಕ್ಷೆ ಮಾದರಿ ನೀಡಲು ಹೋಗಿದ್ದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಾನು ಸೋತಿರುವ ಸುದ್ದಿಗಳು ಬರಲು ಶುರುವಾಗಿದ್ದವು. ಈ ವೇಳೆ ನನ್ನ ಕೋಚ್ ಕೂಡ ನನಗೆ ಮಾಹಿತಿ ನೀಡಿದರು. ಇದರಿಂದ ನಾನು ಆಘಾತಕ್ಕೊಳಗಾದೆ ಎಂದರು.
ಇದನ್ನೂ ಓದಿ: 6 ಸೆಕೆಂಡ್ ತಡ: 100 ಮೀಟರ್ ಬಟರ್ ಫ್ಲೈ ಸೆಮಿಫೈನಲ್ನಿಂದ ಹೊರಬಿದ್ದ ಸಜನ್ ಪ್ರಕಾಶ್
ಸುದ್ದಿವಾಹಿನಿ ಜೊತೆ ಟೋಕಿಯೋದಿಂದಲೇ ಮಾತನಾಡಿರುವ ಮೇರಿ ಕೋಮ್, ತಮ್ಮ ವಿರುದ್ಧ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ನನ್ನ ಗೇಮ್ನಲ್ಲಿ ಸರಿಯಾಗಿ ನಡೆದುಕೊಂಡಿಲ್ಲ. ನನ್ನ ಜೊತೆ ಈ ರೀತಿಯಾಗಿ ಮಾಡಬಾರದಿತ್ತು ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ವೇಲೆನ್ಸಿಯಾ ವಿರುದ್ಧ ನಾನು ಎರಡು ಸಲ ಗೆಲುವು ಸಾಧಿಸಿದ್ದೇನೆ. ಆದರೆ ರೆಫರಿ ಆಕೆಯ ಕೈ ಮೇಲೆ ಎತ್ತಿ ಗೆಲುವು ಘೋಷಣೆ ಮಾಡಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಕೆಟ್ಟದಾಗಿ ಅಂಪೈರಿಂಗ್ ಮಾಡಲಾಗಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಲು ಸಾಧ್ಯವಿಲ್ಲದ ಕಾರಣ, ನಾನು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಮೇರಿ ಕೋಮ್ಗೆ ಮೆಚ್ಚುಗೆ ಮಹಾಪೂರ
ಟೋಕಿಯೋ ಒಲಿಂಪಿಕ್ಸ್ನಲ್ಲಿ ಸೋತಿರುವ ಮೇರಿ ಕೋಮ್ಗೆ ಇದೀಗ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಕೇಂದ್ರ ಸಚಿವ ಕಿರಣ್ ರಿಜಿಜು, ನೀವು ಕೇವಲ ಒಂದು ಪಾಯಿಂಟ್ನಿಂದ ಸೋತಿದ್ದೀರಿ. ಆದರೆ ಯಾವಾಗಲೂ ಚಾಂಪಿಯನ್. ವಿಶ್ವದಲ್ಲಿ ಯಾವುದೇ ಮಹಿಳಾ ಬಾಕ್ಸರ್ ಮಾಡದ ಸಾಧನೆ ನೀವೂ ಮಾಡಿದ್ದೀರಿ. ಇದರಿಂದ ಇಡೀ ಭಾರತ ಹೆಮ್ಮೆ ಪಡುತ್ತದೆ ಎಂದಿದ್ದಾರೆ.
ಇದರ ಜೊತೆಗೆ ಟೀಂ ಇಂಡಿಯಾ ಯೂಸುಫ್ ಪಠಾಣ್, ವಾಸೀಂ ಜಾಫರ್, ಆರ್.ಪಿ ಸಿಂಗ್ ಕೂಡ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ನೀವೂ ಎಲ್ಲರಿಗೂ ಸ್ಪೂರ್ತಿ ಎಂದು ತಿಳಿಸಿದೆ.