ಕರ್ನಾಟಕ

karnataka

ETV Bharat / sports

ನನ್ನ ಕನಸು ಈಡೇರಿಸಿದ್ದಾನೆ..ಈ ಪದಕ ನನಗಾಗಿ: ಬಜರಂಗ್​ ತಂದೆಯ ಸಂತೋಷದ ಮಾತು

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿರುವ ಬಜರಂಗ್ ಪೂನಿಯಾ ಸಾಧನೆಗೆ ಇದೀಗ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

haryana wrestler bajrang puni
haryana wrestler bajrang puni

By

Published : Aug 7, 2021, 5:56 PM IST

Updated : Aug 7, 2021, 7:58 PM IST

ಟೋಕಿಯೋ:ಒಲಿಂಪಿಕ್ಸ್​ನಲ್ಲಿ ಭಾರತಕ್ಕಾಗಿ ಬಜರಂಗ್​ ಪೂನಿಯಾ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಸೆಮಿಫೈನಲ್​​ನಲ್ಲಿ ಸೋಲು ಕಂಡಿದ್ದ ಕುಸ್ತಿಪಟು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕಜಕಿಸ್ತಾನ ಕ್ರೀಡಾಪಟುವಿನ ವಿರುದ್ಧ 8-0 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದರ ಜೊತೆಗೆ ಭಾರತಕ್ಕೆ 7ನೇ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಜರಂಗ್​ ತಂದೆಯ ಸಂತೋಷದ ಮಾತು

ಒಲಿಂಪಿಕ್ಸ್​​ನಲ್ಲಿ ಬಜರಂಗ್ ಪೂನಿಯಾ ಪದಕ ಗೆಲ್ಲುತ್ತಿದ್ದಂತೆ ಅವರ ತಂದೆ ಸಂಭ್ರಮಾಚರಣೆ ಮಾಡಿದ್ದು, ಆತ ನನ್ನ ಕನಸು ಈಡೇರಿಸಿದ್ದಾನೆ. ಈ ಪದಕ ನನಗಾಗಿ ಗೆದ್ದಿದ್ದಾನೆ. ಅಲ್ಲಿಗೆ ಹೋಗುವುದಕ್ಕೂ ಮೊದಲೇ ಆತ ಖಾಲಿ ಕೈಯಿಂದ ಬರುವುದಿಲ್ಲ ಎಂಬ ಭರವಸೆ ನೀಡಿದ್ದನು ಎಂದು ಬಲ್ವಾನ್​ ಸಿಂಗ್​ ತಿಳಿಸಿದ್ದಾರೆ.

ಹೂಟ್ಟೂರಿನಲ್ಲಿ ಮನೆ ಮಾಡಿದ ಸಂಭ್ರಮ

ಬಜರಂಗ್ ಪೂನಿಯಾ ಕಂಚಿನ ಪದಕ ಗೆಲ್ಲುತ್ತಿದ್ದಂತೆ ಅವರ ಹುಟ್ಟೂರು ಸೋನಿಪತ್​ನಲ್ಲಿ ಸಂಭ್ರಮ ಮನೆ ಮಾಡಿದೆ. ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಸಿಹಿ ಹಂಚಿ ಖುಷಿ ಪಟ್ಟಿದ್ದಾರೆ.

ಮೋದಿ, ರಾಷ್ಟ್ರಪತಿ ಅಭಿನಂದನೆ

ಕಂಚಿನ ಪದಕ ಗೆದ್ದಿರುವ ಬಜರಂಗ್​ ಪೂನಿಯಾಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ನಿಮ್ಮ ಸಾಧನೆ ಇಡೀ ಭಾರತವೇ ಮೆಚ್ಚುವಂತಹದ್ದು ಎಂದಿದ್ದಾರೆ. ಇದರ ಬೆನ್ನಲ್ಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್​, ಭಾರತೀಯ ಕುಸ್ತಿಯಲ್ಲಿ ಇದೊಂದು ಅದ್ಭುತ ಕ್ಷಣ. ಕಳೆದ ಅನೇಕ ವರ್ಷಗಳ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದಿದ್ದಾರೆ.

Last Updated : Aug 7, 2021, 7:58 PM IST

ABOUT THE AUTHOR

...view details