ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡ ಜರ್ಮನಿ ವಿರುದ್ಧ 5-4 ಅಂತರದ ಗೆಲುವು ದಾಖಲು ಮಾಡುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಈ ಮೂಲಕ 41 ವರ್ಷಗಳ ಬಳಿಕ ಇತಿಹಾಸ ಸೃಷ್ಟಿ ಮಾಡಿದ್ದು, ಇದಕ್ಕೆ ಎಲ್ಲೆಡೆಯಿಂದ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪುರುಷರ ಹಾಕಿ ತಂಡದಲ್ಲಿ ಹರಿಯಾಣ, ಪಂಜಾಬ್ ಹಾಗೂ ಮಧ್ಯಪ್ರದೇಶದ ಅತಿ ಹೆಚ್ಚಿನ ಹಾಕಿ ಪ್ಲೇಯರ್ಸ್ ಇದ್ದಾರೆ. ಈಗಾಗಲೇ ಪಂಜಾಬ್, ಮಧ್ಯಪ್ರದೇಶದ ಹಾಕಿ ಪ್ಲೇಯರ್ಸ್ಗಳಿಗೆ ಅಲ್ಲಿನ ಸರ್ಕಾರ ಬಹುಮಾನ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ಇದೀಗ ಮನೋಹರ್ಲಾಲ್ ಖಟ್ಟರ್ ನೇತೃತ್ವದ ಹರಿಯಾಣ ಸರ್ಕಾರ ಕೂಡ ಬಂಪರ್ ಬಹುಮಾನ ಘೋಷಿಸಿದೆ. ಒಲಿಂಪಿಕ್ಸ್ ತಂಡದಲ್ಲಿರುವ ಇಬ್ಬರು ಹರಿಯಾಣ ಆಟಗಾರರಿಗೆ ತಲಾ 2.5 ಕೋಟಿ ರೂ, ಸರ್ಕಾರಿ ನೌಕರಿ ಹಾಗೂ ಪ್ಲಾಟ್ ನೀಡುವುದಾಗಿ ಮನೋಹರ್ಲಾಲ್ ಖಟ್ಟರ್ ಟ್ವೀಟ್ ಮಾಡಿದ್ದಾರೆ.