ಮುಂಬೈ: ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಟಿ-74 ಹೈಜಂಪ್ ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮತ್ತೊಂದು ಪದಕ ತಂದು ಕೊಟ್ಟಿದ್ದಾರೆ. ಇವರು 2.07 ಮೀಟರ್ನಷ್ಟು ಎತ್ತರ ಹಾರುವಲ್ಲಿ ಯಶಸ್ವಿಯಾಗಿದ್ದು, ಹೊಸ ಏಷ್ಯನ್ ರೆಕಾರ್ಡ್ ಬರೆದಿದ್ದಾರೆ.
ಈ ಸಾಧನೆಗೆ ಕಾರಣ ಗೂಗಲ್ ಅಂತಾ ಸ್ವತಃ ಪ್ರವೀಣ್ ಕುಮಾರ್ ಹೇಳಿಕೊಂಡಿದ್ದಾರೆ. ಪ್ಯಾರಾ ಅಥ್ಲೆಟಿಕ್ಸ್ ಬಗ್ಗೆ ಯಾವುದೇ ಜ್ಞಾನವಿಲ್ಲದ ತನಗೆ, ಈ ಕ್ರೀಡೆಯ ಬಗ್ಗೆ ತಿಳಿಯಲು ಗೂಗಲ್ಅವಲಂಬಿಸಿದ್ದೆ ಎಂದು ಹೇಳಿದ್ದಾರೆ.
"ನಾನು Googleನಲ್ಲಿ ಎತ್ತರ ಜಿಗಿತದ ವಿಡಿಯೋಗಳನ್ನು ನೋಡುತ್ತಿದ್ದೆ. ಮತ್ತು ಅದರಿಂದ ಹೆಚ್ಚು ಕಲಿಯಲು ಪ್ರಯತ್ನಿಸುತ್ತಿದ್ದೆ. ಮೊದಲು ನನಗೆ ಕಲಿಸಲು ಯಾರೂ ಇರಲಿಲ್ಲ. ಆದರೆ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ತರಬೇತುದಾರ ಡಾ. ಸತ್ಯಪಾಲ್ ಅವರ ಪರಿಚಯವಾಯಿತು. ನಂತರ ಅವರು ನನಗೆ ತರಬೇತಿ ನೀಡಲು ಒಪ್ಪಿದರು ಎಂದು ಅವರು ಹೇಳಿದ್ದಾರೆ.