ಟೋಕಿಯೋ: ಕರ್ನಾಟಕದ ಬೆಂಗಳೂರು ಮೂಲದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಇಂದು ನಡೆದ ಮೂರನೇ ಸುತ್ತಿನಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಚೊಚ್ಚಲ ಒಲಿಂಪಿಕ್ ಪದಕಕ್ಕಾಗಿ ಪ್ರಬಲ ಸ್ಪರ್ಧೆಯಲ್ಲಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ ಕನ್ನಡತಿ ಅದಿತಿ ಅಶೋಕ್ - Aditi Ashok
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಎರಡನೇ ಸ್ಥಾನದಲ್ಲಿದ್ದು, ನಾಳೆ ಅಂತಿಮ ಸುತ್ತಿನಲ್ಲಿ ಆಡಲಿದ್ದಾರೆ.
ಅಮೆರಿಕದ ನೆಲ್ಲಿ ಕೊರ್ಡಾ ಮೊದಲ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್‌ನ ಲಿಡಿಯಾ ಕೋ, ಆಸ್ಟ್ರೇಲಿಯಾದ ಹನ್ನಾ ಗ್ರೀನ್, ಡೆಮಾರ್ಕ್‌ನ ಕ್ರಿಸ್ಟಿನ್ ಪೆಡರ್ಸನ್ ಜಪಾನ್‌ನ ಮೊನೆ ಇನಾಮಿ - ಈ ನಾಲ್ವರು ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ನಾಳೆ ಬೆಳಗ್ಗೆ ಅಂತಿಮ ಸುತ್ತು ನಡೆಯಲಿದ್ದು, ಕನ್ನಡದ ಹುಡುಗಿ ಪದಕ ಗೆಲ್ಲುವ ನಿರೀಕ್ಷೆಯಿದೆ.
ವಿಶ್ವ ಶ್ರೇಯಾಂಕಪಟ್ಟಿಯಲ್ಲಿ ಅದಿತಿ ಅಶೋಕ್ 45ನೇ ಸ್ಥಾನವನ್ನು ಸಂಪಾದಿಸುವ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ. ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಗಾಲ್ಫರ್ ಎಂಬ ಹೆಗ್ಗಳಿಕೆಗೂ ಅದಿತಿ ಪಾತ್ರರಾಗಿದ್ದಾರೆ.