ಕರ್ನಾಟಕ

karnataka

ETV Bharat / sports

ಆಂಧ್ರದಲ್ಲೂ ಸಿಂಧುಗೆ ಅದ್ಧೂರಿ ಸ್ವಾಗತ.. ನಗದು ಪುರಸ್ಕಾರ ನೀಡಿ ಗೌರವಿಸಿದ ಜಗನ್!

ಭಾರತದ ಬ್ಯಾಡ್ಮಿಂಟನ್​ ತಾರೆ​ ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದು, ಆಂಧ್ರಪ್ರದೇಶಕ್ಕೆ ತೆರಳಿರುವ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.

YS Jagan Mohan Reddy
YS Jagan Mohan Reddy

By

Published : Aug 6, 2021, 9:32 PM IST

Updated : Aug 6, 2021, 10:44 PM IST

ಅಮರಾವತಿ(ಆಂಧ್ರಪ್ರದೇಶ):ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುಗೆ ತೆಲಂಗಾಣದಂತೆ ಆಂಧ್ರಪ್ರದೇಶದಲ್ಲೂ ಅದ್ಧೂರಿ ಸ್ವಾಗತ ಸಿಕ್ಕಿದೆ. ಮುಖ್ಯಮಂತ್ರಿ ಜಗನ್ ಮೋಹನ್​ ರೆಡ್ಡಿ ಸನ್ಮಾನ ಮಾಡಿ ಗೌರವಿಸಿದ್ದು, ವಿಶೇಷವಾದ ನೆನಪಿನ ಕಾಣಿಕೆ ನೀಡಿದ್ದಾರೆ.

ಅದ್ಧೂರಿ ಸ್ವಾಗತ ನೀಡಿದ ಜಗನ್​

ಕಳೆದ ಮೂರು ದಿನಗಳ ಜಪಾನ್​ನಿಂದ ಭಾರತಕ್ಕೆ ಬಂದಿರುವ ಸಿಂಧುಗೆ ದೆಹಲಿಯಲ್ಲಿ ವೆಲ್​ಕಮ್ ಮಾಡಿಕೊಳ್ಳಲಾಗಿತ್ತು. ಇದಾದ ಬಳಿಕ ಹೈದರಾಬಾದ್​ನಲ್ಲಿ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಇಂದು ಆಂಧ್ರಪ್ರದೇಶಕ್ಕೆ ಕುಟುಂಬ ಸಮೇತವಾಗಿ ತೆರಳಿರುವ ಸಿಂಧುಗೆ ಮುಖ್ಯಮಂತ್ರಿ ಜಗನ್ ಮೋಹನ್​ ರೆಡ್ಡಿ ಬರಮಾಡಿಕೊಂಡಿದ್ದು, ಸನ್ಮಾನ ಮಾಡಿದ್ದಾರೆ.

ಕುಟುಂಬದೊಂದಿಗೆ ಜಗನ್ ಭೇಟಿ ಮಾಡಿದ ಸಿಂಧು

ಈ ವೇಳೆ 30 ಲಕ್ಷ ರೂ. ನಗದು ಚೆಕ್​ ನೀಡಿರುವ ಸಿಎಂ, ಆದಷ್ಟು ಬೇಗ ಬ್ಯಾಡ್ಮಿಂಟನ್​ ಅಕಾಡೆಮಿಯಲ್ಲಿ ಯುವ ಪ್ರತಿಭೆಗಳಿಗೆ ತರಬೇತಿ ನೀಡುವಂತೆ ಮನವಿ ಮಾಡಿದ್ದಾರೆ. ವಿಶಾಖಪಟ್ಟಣದಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪಿಸಲು ಜಗನ್​​ ಸರ್ಕಾರ ಅವರಿಗೆ ಎರಡು ಎಕರೆ ಭೂಮಿ ಮಂಜೂರು ಮಾಡಿದೆ.

ಈ ಹಿಂದೆ ರಿಯೋ ಒಲಿಂಪಿಕ್ಸ್​​ನಲ್ಲಿ ಬೆಳ್ಳಿ ಗೆದ್ದ ಸಿಂಧುಗೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಇತರ ಪ್ರಮುಖರು ಅನೇಕ ಬಹುಮಾನ ನೀಡಿದ್ದರು. ಟೋಕಿಯೋದಲ್ಲಿ ಚೀನಾದ ಜಿಯಾವೊ ವಿರುದ್ಧ ಮೊದಲ ಗೇಮ್​ ಅನ್ನು 21-13ರಿಂದ ಗೆದ್ದ ಸಿಂಧು 1-0 ಮುನ್ನಡೆ ಸಾಧಿಸಿದ್ದ ಸಿಂಧು, 2ನೇ ಗೇಮ್​ನಲ್ಲೂ ಪ್ರಾಬಲ್ಯ ಮುಂದುವರೆಸಿ 21-15 ರಿಂದ ಗೆಲುವು ಸಾಧಿಸಿ, ಕಂಚಿನ ಪದಕ ಗೆದ್ದಿದ್ದಾರೆ.

ನೆನಪಿನ ಕಾಣಿಕೆ ನೀಡಿದ ಜಗನ್​ ಮೋಹನ್​

ಇದನ್ನೂ ಓದಿರಿ: Tokyo Olympics: ಕಂಚಿನ ಪದಕಕ್ಕೆ ಮುತ್ತಿಕ್ಕಿದ 'ಬೆಳ್ಳಿ ಹುಡುಗಿ' ಪಿ.ವಿ. ಸಿಂಧು

Last Updated : Aug 6, 2021, 10:44 PM IST

ABOUT THE AUTHOR

...view details