ಚಂಡೀಗಢ(ಪಂಜಾಬ್):ಟೋಕಿಯೋ ಒಲಿಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ನೀರಜ್ ಚೋಪ್ರಾ ಐತಿಹಾಸಿಕ ಸಾಧನೆ ಮಾಡಿದ್ದು, ಭಾರತದ ಯಾವುದೇ ಅಥ್ಲೀಟ್ಸ್ ಮಾಡದಂತಹ ದಾಖಲೆ ಬರೆದಿದ್ದಾರೆ. ಅವರ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅನೇಕ ಯುವ ಪೀಳಿಗೆ ಅವರ ಪ್ರದರ್ಶನದಿಂದ ಫುಲ್ ಖುಷ್ ಆಗಿದ್ದಾರೆ.
ಜಾವಲಿನ್ ಥ್ರೋದಲ್ಲಿ ಅದ್ಭುತ ಸಾಧನೆ ಮಾಡಿರುವ 23 ವರ್ಷದ ನೀರಜ್ ಚೋಪ್ರಾ ಮೇಲೆ ಇದೀಗ ಸಾವಿರಾರು ಹುಡುಗಿಯರಿಗೆ ಕ್ರಸ್ ಆಗಿದ್ದು, ಚಂಡೀಗಢ ಹುಡುಗಿಯೊಬ್ಬಳು ಇದೇ ವಿಚಾರವಾಗಿ ಮಾತನಾಡಿದ್ದು, "ಐ ಲವ್ ಯೂ ನೀರಜ್" ಎಂದಿದ್ದಾಳೆ. ನೀರಜ್ ಚೋಪ್ರಾ ಪ್ರದರ್ಶನದಿಂದ ಸಂತಸಗೊಂಡಿರುವ ಚಂಡೀಗಢ ಯುವತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾಳೆ. ಲಕ್ಷಾಂತರ ಯುವಕರಿಗೆ ಯವ ಪ್ರತಿಭಾವಂತ ಕ್ರೀಡಾಪಟು ನೀರಜ್ ಚೋಪ್ರಾ ಮಾದರಿಯಾಗಿದ್ದು, ಅವರ ಕಠಿಣ ಪರಿಶ್ರಮದಿಂದಲೇ ಈ ಫಲ ಸಿಕ್ಕಿದೆ ಎಂದು ಹೇಳಿದ್ದಾಳೆ.
ನೀರಜ್ ಚೋಪ್ರಾ ಅತಿ ಕಡಿಮೆ ವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡುತ್ತಿದ್ದಂತೆ ಅನೇಕ ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ನೀರಜ್ ಚೋಪ್ರಾಗೆ ಅಭಿನಂದನೆ ಸಲ್ಲಿಸುತ್ತಿದ್ದು, ಅವರೊಬ್ಬ 'ನ್ಯಾಷನಲ್ ಕ್ರಷ್' ಎಂದಿದ್ದಾರೆ. ದೇಶಕ್ಕೆ ಗೌರವ ತಂದಿರುವ ನೀರಜ್ ಚೋಪ್ರಾ ನೋಡಲು ಸುಂದರವಾಗಿರುವ ಕಾರಣ ಅನೇಕ ಹುಡುಗಿಯರಿಗೆ ಇಷ್ಟವಾಗಿದ್ದಾರೆ.