ಟೋಕಿಯೋ:ಒಲಿಂಪಿಕ್ಸ್ನಲ್ಲಿ ಭಾರತದ ಅಥ್ಲೀಟ್ಸ್ಗಳು ಕೊನೆ ಕ್ಷಣದಲ್ಲಿ ನಿರಾಸೆಗೊಳಗಾಗುತ್ತಿದ್ದು, ಬಾಕ್ಸರ್ ಪೂಜಾ ರಾಣಿ ಕೂಡ ಕ್ವಾರ್ಟರ್ಫೈನಲ್ನಲ್ಲಿ ಸೋಲು ಕಾಣುವ ಮೂಲಕ ಅಭಿಯಾನ ಮುಗಿಸಿದ್ದಾರೆ. 75 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಪೂಜಾ ರಾಣಿ ಚೀನಾದ ಚಿಯಾನ್ ಲೀ ವಿರುದ್ಧ 0-5 ಅಂತರದಿಂದ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದರು. ಜೊತೆಗೆ ಕಂಚಿನ ಪದಕಕ್ಕೆ ಮುತ್ತಿಕ್ಕುವ ಅವಕಾಶ ತಪ್ಪಿಸಿಕೊಂಡಿದ್ದಾರೆ.
ಈಗಾಗಲೇ ಸೆಮಿಫೈನಲ್ಗೆ ಲಗ್ಗೆ ಹಾಕಿರುವ ಭಾರತದ ಮತ್ತೋರ್ವ ಬಾಕ್ಸರ್ ಲವ್ಲಿನಾ ಭಾರತಕ್ಕೆ ಕನಿಷ್ಠ ಕಂಚಿನ ಪದಕ ಗೆದ್ದು ಕೂಡಲಿದ್ದಾರೆ. ಇದೇ ಮೊದಲ ಸಲ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗುವ ಅವಕಾಶ ಪಡೆದುಕೊಂಡಿದ್ದ ಪೂಜಾ ರಾಣಿ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಕ್ವಾರ್ಟರ್ಫೈನಲ್ಗೆ ಲಗ್ಗೆ ಹಾಕಿದ್ದರು. ಆದರೆ ಇಂದಿನ ಪಂದ್ಯದಲ್ಲಿ 30 ವರ್ಷದ ಪೂಜಾ ರಿಯೋ ಒಲಿಂಪಿಕ್ಸ್ ಕಂಚಿನ ವಿಜೇತೆ ಚಿಯಾನ್ ಲೀ ವಿರುದ್ಧ ಸೋಲು ಕಂಡಿದ್ದಾರೆ.