ಟೋಕಿಯೋ:2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಹೆಸರು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತೆ ಮಾಡಿರುವ ನೀರಜ್ ಚೋಪ್ರಾಗೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜಾವಲಿನ್ ಥ್ರೋದಲ್ಲಿ 87.58 ಮೀಟರ್ ಎಸೆಯುವ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದೀಗ ತಮ್ಮ ಮುಂದಿನ ಯೋಜನೆಗಳ ಕುರಿತು ಚಿನ್ನದ ಹುಡುಗ ಮಾಹಿತಿ ಹಂಚಿಕೊಂಡಿದ್ದಾರೆ.
ಚಿನ್ನದ ಪದಕಕ್ಕೆ ಮುತ್ತಿಕ್ಕಿರುವ ನೀರಜ್ ಚೋಪ್ರಾ ವಿಶ್ರಾಂತಿ ಪಡೆದುಕೊಳ್ಳುವ ಬದಲು ಮುಂದಿನ ಬೇಟೆಗಾಗಿ ಸಿದ್ಧರಾಗುವುದಾಗಿ ಹೇಳಿಕೊಂಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಏಷ್ಯನ್ ಗೇಮ್ಸ್, ಕಾಮಲ್ವೆಲ್ತ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.
ಮನಾದಳ ಬಿಚ್ಚಿ ಮಾತನಾಡಿದ ನೀರಜ್
- ಪ್ರಶ್ನೆ: ಅಥ್ಲೀಟ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದಿದ್ದೀರಿ, ಏನನ್ನಿಸುತ್ತಿದೆ?
ದೇಶಕ್ಕಾಗಿ ಮೊದಲ ಪದಕ ಗೆದ್ದಿರುವುದಕ್ಕೆ ಹೆಮ್ಮೆ ಇದೆ. ಅದು ಚಿನ್ನದ ಪದಕ ಗೆದ್ದಿರುವೆ. ಅಕ್ಷರಗಳಲ್ಲಿ ಇದರ ವರ್ಣನೆ ಅಸಾಧ್ಯ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ನಾನು ಚಿನ್ನದ ಪದಕ ಹಾಕಿಕೊಂಡು ವೇದಿಕೆ ಮೇಲೆ ನಿಂತಿದ್ದು ನಿಜಕ್ಕೂ ಅದ್ಭುತ ಕ್ಷಣಗಳಲ್ಲಿ ಒಂದಾಗಿದೆ. ಬರುವ ದಿನಗಳು ಭಾರತೀಯ ಅಥ್ಲೀಟ್ಸ್ಗಳಿಗೆ ಉತ್ತಮವಾಗಿರುತ್ತವೆ ಎಂದಿದ್ದಾರೆ.
ಇದನ್ನೂ ಓದಿರಿ: ಮನಗೆದ್ದ ಗೋಲ್ ಕೀಪರ್ ಶ್ರೀಜೇಶ್ಗೆ 1 ಕೋಟಿ ರೂ. ನೀಡಿದ ದುಬೈ ಮೂಲದ ಉದ್ಯಮಿ!
- ಪ್ರಶ್ನೆ: ಚಿನ್ನದ ಪದಕ ಮಿಲ್ಖಾ ಸಿಂಗ್ಗೆ ಅರ್ಪಣೆ ಮಾಡಿದ್ದೀರಿ?
ನಾನು ಮಿಲ್ಖಾ ಸಿಂಗ್ ಅವರ ಬಹಳಷ್ಟು ವಿಡಿಯೋ ನೋಡುತ್ತಿದ್ದೆ. ನಮ್ಮ ದೇಶದಿಂದ ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ ಭಾಗಿಯಾಗಿ ಅಥ್ಲೀಟ್ಸ್ನಲ್ಲಿ ಪದಕ ಗೆಲ್ಲಬೇಕೆಂದು ಹೇಳುತ್ತಿದ್ದರು. ಅನೇಕ ಸಲ ಆ ಕನಸು ಕಂಡಿದ್ದಾಗಿ ತಿಳಿಸಿದ್ದಾರೆ. ಅವರ ಮಾತಿನಂತೆ ನಾನು ಸಾಧನೆ ಮಾಡಿದ್ದೇನೆ. ಈ ಸಲ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು, ರಾಷ್ಟ್ರಗೀತೆ ಪ್ರಸಾರವಾದಾಗ ನನಗೆ ತುಂಬಾ ಖುಷಿಯಾಯಿತು. ಜೊತೆಗೆ ಅವರ ಬಹುದಿನದ ಆಸೆ ಈಡೇರಿಸಿದ್ದಕ್ಕಾಗಿ ಈ ಚಿನ್ನ ಅವರಿಗೆ ಅರ್ಪಣೆ ಮಾಡಿದ್ದೇನೆ.
- ಪ್ರಶ್ನೆ: ಫೈನಲ್ನಲ್ಲಿ ನಿಮ್ಮ ಮನಸ್ಸಿನಲ್ಲಿ ಏನು ಓಡುತ್ತಿತ್ತು? ಚಿನ್ನ ಗೆದ್ದಿದ್ದೇನೆಂದು ನಿಮಗೆ ಅನಿಸಲು ಆರಂಭವಾಗಿದ್ದು ಯಾವಾಗ?
ಫೈನಲ್ ಆರಂಭಗೊಂಡಾಗ ನನ್ನ ಕೈಯಿಂದ ಆದಷ್ಟು ಉತ್ತಮ ಪ್ರದರ್ಶನ ನೀಡಬೇಕೆಂಬುದು ನನ್ನ ಇರಾದೆಯಾಗಿತ್ತು. ಜಾವಲಿನ್ ಥ್ರೋ ತುಂಬಾ ಟೆಕ್ನಿಕಲ್ ಆಟ, ಸಣ್ಣ ತಪ್ಪಾದರೂ ದೂರ ಕಡಿಮೆಯಾಗುತ್ತದೆ. ಎಲ್ಲರೂ ಮೊದಲ ಎಸೆತದ ನಂತರ ನನ್ನ ಸಂಭ್ರಮ ಆರಂಭಗೊಂಡಿತ್ತು.
- ಪ್ರಶ್ನೆ: ಮೂರು ವರ್ಷಗಳ ಸತತ ಪ್ರಯತ್ನದಿಂದ ಈ ಪದಕ ಗೆದ್ದಿದ್ದೀರಿ, ಗಾಯಗೊಂಡು 2019ರ ಟೂರ್ನಿ ಕೂಡ ಮಿಸ್ ಮಾಡಿಕೊಂಡಿದ್ದೀರಿ? ತಯಾರಿ ಹೇಗಿತು?