ಟೋಕಿಯೋ:2020ನೇ ಸಾಲಿನ ಒಲಿಂಪಿಕ್ಸ್ನ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕುಸ್ತಿಪಟು ಬಜರಂಗ್ ಪೂನಿಯಾ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಎದುರಾಳಿ ವಿರುದ್ಧ 8-0 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಭಾರತಕ್ಕೆ ಮತ್ತೊಂದು ಪದಕ.. 'ಕಂಚಿನ ಹಾರ'ಕ್ಕೆ ಮುತ್ತಿಕ್ಕಿದ ಬಜರಂಗ್ ಪೂನಿಯಾ - ಕುಸ್ತಿಪಟು ಬಜರಂಗ್ ಪೂನಿಯಾ
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದ್ದು, ಕುಸ್ತಿಯಲ್ಲಿ ಬಜರಂಗ್ ಪೂನಿಯಾ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
Bajrang Punia
ಕಜಕಿಸ್ತಾನದ ಡೌಲೆಟ್ ನಿಯಾಜ್ಬೆಕೊವ್ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಭಾರತದ ಕುಸ್ತಿಪಟು ಕಂಚಿನ ಹಾರಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಭಾರತಕ್ಕೆ ಒಟ್ಟು 7 ಪದಕ ಬಂದಂತಾಗಿದೆ.
ಪುನಿಯಾ ಟೋಕಿಯೋ ಒಲಂಪಿಕ್ಸ್ನಲ್ಲಿ ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದರು. ಆದರೆ ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಸಿ, ಈ ವೇಳೆ ಅದ್ಭುತ ಪ್ರದರ್ಶನ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.
Last Updated : Aug 7, 2021, 4:38 PM IST