ಕರ್ನಾಟಕ

karnataka

ETV Bharat / sports

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಜಪಾನ್ ವಿರುದ್ಧ ಸೋತು ಹೊರಬಿದ್ದ ಭಾರತ ಹಾಕಿ ತಂಡ

ಜಪಾನ್​ ಪರ ರೈಕಿ ಫುಜಿಶಿಮಾ, ಶೋಟ ಯಮಡ, ಯೋಶಿಕಾ ಕಿರಿಶಿಟ, ಕೋಸ್​ ಕವಾಬೆ​ ಮತ್ತು ರ್ಯೋಮ ಓಕಾ ಗೋಲುಗಳಿಸಿದರೆ, ಭಾರತದ ಪರ ಹಾರ್ದಿಕ್ ಸಿಂಗ್ 2 ಮತ್ತು ಹರ್ಮನ್​ಪ್ರೀತ್​ ಸಿಂಗ್ ಗೋಲು ಸಿಡಿಸಿ ಸೋಲಿನ ಅಂತರ ತಗ್ಗಿಸಿದರು.

Asian Champions Trophy Hockey
ಜಪಾನ್ ವಿರುದ್ಧ ಸೋತು ಹೊರಬಿದ್ದ ಭಾರತ ಹಾಕಿ ತಂಡ

By

Published : Dec 21, 2021, 9:13 PM IST

ಢಾಕಾ: ಮೂರು ಬಾರಿಯ ಏಷ್ಯನ್ ಚಾಂಪಿಯನ್​ ಭಾರತ ತಂಡ ಜಪಾನ್​ ವಿರುದ್ಧ ನಡೆದ ಪುರುಷರ ಏಷ್ಯನ್​ ಚಾಂಪಿಯನ್​ ಟ್ರೋಪಿ ಸೆಮಿಫೈನಲ್​ನಲ್ಲಿ ಜಪಾನ್​ ವಿರುದ್ಧ ಸೋಲು ಕಂಡು ನಿರಾಶೆಯನುಭವಿಸಿದೆ.

ಮಂಗಳವಾರ ಮೌಲಾನಾ ಭಾಸನಿ ಹಾಕಿ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್​​ ಪಂದ್ಯದಲ್ಲಿ ಮನ್​ಪ್ರೀತ್​ ಸಿಂಗ್ ಬಳಗ 3-5 ಗೋಲುಗಳ ಅಂತರದಲ್ಲಿ ಸೋಲು ಕಂಡು ಟೂರ್ನಿಯಿಂದ ನಿರ್ಗಮಿಸಿತು. ಹಾಲಿ ಚಾಂಪಿಯನ್​ ಜಪಾನ್ ವಿರುದ್ಧ 6-0ಯಲ್ಲಿ ಗೆಲುವು ಸಾಧಿಸಿತ್ತು. ಆದರೆ, ಮಂಗಳವಾರ ಅದೇ ಪ್ರದರ್ಶನ ತೋರುವಲ್ಲಿ ವಿಫಲರಾದರು.

ಜಪಾನ್​ ಪರ ರೈಕಿ ಫುಜಿಶಿಮಾ, ಶೋಟ ಯಮಡ, ಯೋಶಿಕಾ ಕಿರಿಶಿಟ, ಕೋಸ್​ ಕವಾಬೆ​ ಮತ್ತು ರ್ಯೋಮ ಓಕಾ ಗೋಲುಗಳಿಸಿದರೆ, ಭಾರತದ ಪರ ಹಾರ್ದಿಕ್ ಸಿಂಗ್ 2 ಮತ್ತು ಹರ್ಮನ್​ಪ್ರೀತ್​ ಸಿಂಗ್ ಗೋಲು ಸಿಡಿಸಿ ಸೋಲಿನ ಅಂತರವನ್ನು ತಗ್ಗಿಸಿದರು. 2018ರ ಚಾಂಪಿಯನ್ ಪಾಕಿಸ್ತಾನ ದಕ್ಷಿಣ ಕೊರಿಯಾ ವಿರುದ್ಧ ನಡೆದ ರೋಚಕ ಸೆಮಿಫೈನಲ್ಸ್​ನಲ್ಲಿ 5-6ರಲ್ಲಿ ಸೋಲು ಕಂಡಿತು.

ಇದನ್ನೂ ಓದಿ: South Africa vs India: ಕೋಚ್​ ರಾಹುಲ್ ದ್ರಾವಿಡ್ ದಾಖಲೆ ಮೇಲೆ ವಿರಾಟ್​ ಕೊಹ್ಲಿ ಕಣ್ಣು

ABOUT THE AUTHOR

...view details