ಟೋಕಿಯೋ: ಜಪಾನ್ನ ಟೋಕಿಯೋದಲ್ಲಿ ಬಹುನಿರೀಕ್ಷಿತ ಒಲಿಂಪಿಕ್ಸ್ ಕ್ರಿಡಾಕೂಟ ನಡೆಯುತ್ತಿದ್ದು, ನೂರಾರು ದೇಶದ ಸಾವಿರಾರು ಸ್ಪರ್ಧಿಗಳು ಈ ಕ್ರಿಡಾಹಬ್ಬದಲ್ಲಿ ಭಾಗಿಯಾಗಿದ್ದಾರೆ. ಕೆಲವರು ಉತ್ತಮ ಪ್ರದರ್ಶನ ನೀಡಿ ಪದಕ ಗೆಲ್ಲುತ್ತಿದ್ದರೆ, ಮತ್ತೆ ಕೆಲವರು ನಿರಾಸೆ ಅನುಭವಿಸುತ್ತಿದ್ದಾರೆ. ಇದರ ಮಧ್ಯೆ ಅಪರೂಪದ ಘಟನೆಯೊಂದು ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಅರ್ಜೆಂಟೀನಾದ ಫೆನ್ಸರ್(ಕತ್ತಿವರಸೆ) ಮಾರಿಸ್ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದು, ತಾವು ಆಡಿರುವ ಮೊದಲ ಪಂದ್ಯದಲ್ಲೇ ಸೋಲು ಕಂಡಿದ್ದಾರೆ. ಸೋಲಿನಿಂದ ನಿರಾಸೆಗೊಳಗಾಗಿದ್ದ ಅವರಿಗೆ ಕೋಚ್ ಲವ್ ಪ್ರಪೋಸ್ ಮಾಡುವ ಮೂಲಕ ಹೃದಯ ಗೆದ್ದಿದ್ದಾರೆ.