ಟೋಕಿಯೋ (ಜಪಾನ್): ಕ್ರೀಡಾ ಇತಿಹಾಸದಲ್ಲೇ ವಿಭಿನ್ನ ಎನಿಸಿರುವ ಒಲಿಂಪಿಕ್ಸ್ ಇಂದಿನಿಂದ ಟೋಕಿಯೋದಲ್ಲಿ ಆರಂಭವಾಗಿದ್ದು, ಸರಳ ಸಮಾರಂಭದಲ್ಲಿ ವಿಶಿಷ್ಟವಾಗಿ ಕೋಟ್ಯಂತರ ಕ್ರೀಡಾಪ್ರೇಮಿಗಳ ಕಣ್ಮನ ಸೆಳೆದಿದೆ.
ಟೋಕಿಯೋ 2020 ಒಲಿಂಪಿಕ್ಸ್ ಆರಂಭದ ರಂಗುರಂಗಿನ ಈ ಕಾರ್ಯಕ್ರಮದಲ್ಲಿ 1,800 ಡ್ರೋನ್‌ಗಳಿಂದ ಹೊಳೆಯುವ ಬೆಳಕಿನಿಂದ ಆಗಸದಲ್ಲಿ ಅತ್ಯಾಕರ್ಷಕ ಗೋಳಾಕಾರದ ರಚನೆ ಮಾಡಿದ್ದು, ನೆರೆದಿದ್ದವರ ಮನಸೂರೆಗೊಂಡಿದೆ.
ಟೋಕಿಯೋ ಒಲಿಂಪಿಕ್ಸ್; 1,800 ಡ್ರೋನ್‌ಗಳ ಗೋಳಾಕೃತಿಯ ಚಿತ್ತಾರಕ್ಕೆ ಮನಸೋತ ಕ್ರೀಡಾ ಪ್ರೇಮಿಗಳು 1 ಸಾವಿರದ 800 ಡ್ರೋನ್‌ಗಳು 68 ಸಾವಿರ ಆಸನಗಳ ಸಾಮರ್ಥ್ಯದ ಒಲಿಂಪಿಕ್ಸ್ ಕ್ರೀಡಾಂಗಣದ ಮೇಲಕ್ಕೆ ಹೋಗಿ ಚಿತ್ತಾರವನ್ನು ಬಿಡಿಸಿದೆ. ನೀಲಿ ಹಾಗೂ ಬಿಳಿ ಬಣ್ಣದಿಂದ ಕೂಡಿದ್ದ ಹೊಳೆಯುವ ಬೆಳಕಿನ ಚಂದ್ರನಾಕೃತಿಗೆ ಜನ ಫಿದಾ ಆಗಿದ್ದಾರೆ.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್: ನಾಳೆ ಭಾರತದ ಸ್ಪರ್ಧಿಗಳಿಗೆ ಎದುರಾಗುವ ಸವಾಲೇನು? ಇಲ್ಲಿದೆ ಮಾಹಿತಿ..
ಟೋಕಿಯೋ ಒಲಿಂಪಿಕ್ಸ್ 2020ರ ಎರಡನೇ ದಿನವಾದ ನಾಳೆ ಭಾರತೀಯ ಅಥ್ಲೀಟ್ಸ್ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರಮುಖವಾಗಿ ಪುರುಷರು, ಮಹಿಳೆಯರ ಹಾಕಿ ತಂಡ, ಬಾಕ್ಸರ್, ಶಟ್ಲರ್, ಪ್ಯಾಡ್ಲರ್, ರೋವರ್, ಶೂಟರ್ಗಳು ಹಾಗೂ ವೇಟ್ಲಿಫ್ಟರ್ಗಳು ತಮ್ಮ ಪ್ರದರ್ಶನ ನೀಡಲಿದ್ದಾರೆ.