ನ್ಯೂಯಾರ್ಕ್:ಯುಎಸ್ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿಯ 5ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ 3-6, 2-6, 6-3, 6-4, 6-3 ಸೆಟ್ಗಳಿಂದ ಪ್ಯಾಬ್ಲೊ ಕ್ಯಾರೆನೋ ಬುಸ್ಟಾ ವಿರುದ್ಧ ಜಯ ಗಳಿಸಿ ಫೈನಲ್ ತಲುಪಿದ್ದಾರೆ.
ಸುಮಾರು 3 ಗಂಟೆ 23 ನಿಮಿಷ ನಡೆದ ರೋಚಕ ಹಣಾಹಣಿಯಲ್ಲಿ ಜ್ವರೆವ್ ಗೆಲುವಿನ ನಗೆ ಬೀರಿದ್ದಾರೆ. ಮೊದಲ 2 ಸೆಟ್ಗಳಲ್ಲಿ ಹಿನ್ನಡೆ ಅನುಭವಿಸಿದ ಜ್ವೆರೆವ್ ನಂತರ ಕಂಬ್ಯಾಕ್ ಮಾಡಿದ್ರು. ಮೂರು ಸೆಟ್ಗಳಲ್ಲಿ ಪ್ರಾಬಲ್ಯ ಮೆರೆಯುವ ಮೂಲಕ ಗೆಲುವು ಸಾಧಿಸಿದ್ರು.