ದುಬೈ: ಭಾರತದ ನಂಬರ್ ಒನ್ ಶ್ರೇಯಾಂಕದ ಪ್ರಜ್ನೇಶ್ ಗುಣೇಶ್ವರನ್ ಅವರನ್ನು ಯೂಕಿ ಬಾಂಬ್ರಿ ದುಬೈ ಡ್ಯೂಟಿ ಫ್ರೀ ಚಾಂಪಿಯನ್ಶಿಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲಿಸಿ ಟೆನ್ನಿಸ್ಗೆ ಅದ್ಭುತ ಕಮ್ಬ್ಯಾಕ್ ಮಾಡಿದ್ದಾರೆ.
28 ವರ್ಷದ ಬಾಂಬ್ರಿ ಪ್ರಜ್ನೇಶ್ರನ್ನು 6-1, 6-4ರ ನೇರ ಸೆಟ್ಗಳ ಅಂತರದಿಂದ ಮಣಿಸುವ ಮೂಲಕ ಕ್ವಾಲಿಫೈಯರ್ನ 2ನೇ ಸುತ್ತು ಪ್ರವೇಶಿಸಿದ್ದಾರೆ. ಜೂನಿಯರ್ ವಿಭಾಗದ ಮಾಜಿ ನಂಬರ್ 1 ಆಗಿರುವ ಬಾಂಬ್ರಿ ಪ್ರಜ್ನೇಶ್ ವಿರುದ್ಧ ಸತತ 3ನೇ ಮುಖಾಮುಖಿಯಲ್ಲೂ ಗೆಲುವು ಸಾಧಿಸಿದ್ದಾರೆ. ಈ ಹಿಂದೆ 2017ರಲ್ಲಿ ಬೆಂಗಳೂರು ಮತ್ತು ಕರ್ಶಿಯ ಮುಖಾಮುಖಿಯಲ್ಲಿ ಸೋಲಿಸಿದ್ದರು.
ಗಾಯದ ಕಾರಣ ಟೆನ್ನಿಸ್ನಿಂದ 2 ವರ್ಷಗಳ ಕಾಲ ದೂರ ಉಳಿದಿದ್ದ ಯೂಕಿ, ಸಿಂಗಾಪುರ್ ಓಪನ್ನಲ್ಲಿ ಹಿಂತಿರುಗಿದರಾದರೂ ಮ್ಯಾಥ್ಯೂ ಎಡ್ಬನ್ ವಿರುದ್ಧ ಸೋಲು ಕಂಡಿದ್ದರು. ಮುಂದಿನ ಸುತ್ತಿನ ಪಂದ್ಯದಲ್ಲಿ ಅವರು ಭಾರತದವರೇ ಆದ ರಾಮ್ಕುಮಾರ್ ರಾಮನಾಥನ್ ಅವರನ್ನು ಎದುರಿಸಲಿದ್ದಾರೆ. ರಾಮನಾಥನ್ ರಷ್ಯಾದ ಇವ್ಗೆನಿ ಡಾನ್ಸ್ಕಾಯ್ ವಿರುದ್ಧ 6-4, 6-4ರಲ್ಲಿ ಗೆಲುವು ಪಡೆದಿದ್ದರು.
ರಾಮ್ಕುಮಾರ್ ವಿರುದ್ಧ ಈ ಹಿಂದಿನ 5 ಮುಖಾಮುಖಿಯಲ್ಲಿ ಯೂಕಿ 4 ಬಾರಿ ಗೆಲುವು ಸಾಧಿಸಿದ್ದಾರೆ. ಈ ಇಬ್ಬರಲ್ಲಿ ಯಾರೇ ಗೆದ್ದರೂ ಟೂರ್ನಿಯ ಪ್ರಮುಖ ಸುತ್ತಿನಲ್ಲಿ ಏಕೈಕ ಭಾರತೀಯನಾಗಿ ಕಣಕ್ಕಿಳಿಯಲಿದ್ದಾರೆ.
ಇದನ್ನು ಓದಿ:ಯಾವುದೇ ಕ್ರಮಾಂಕದಲ್ಲಿ ಆಡಲು ನಾನು ಸಿದ್ಧ.. ಇಶಾನ್ ಕಿಶನ್