ದೋಹಾ:ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾ ತೈಪೆಯ ಲಿನ್ ಯುನ್-ಜು ವಿರುದ್ಧ ಅಚಂತ ಶರತ್ ಕಮಲ್ ಸೋಲು ಅನುಭವಿಸಿದರು.
ದೋಹಾದಲ್ಲಿ ನಡೆದ ವಿಶ್ವ ಟೇಬಲ್ ಟೆನಿಸ್ (ಡಬ್ಲ್ಯುಟಿಟಿ) ಸ್ಪರ್ಧೆಯಲ್ಲಿ ವಿಶ್ವದ 32 ನೇ ಕ್ರಮಾಂಕದ ಶರತ್ 6-11, 4-11, 8-11 ಸೆಟ್ಗಳ ಅಂತರದಲ್ಲಿ ವಿಶ್ವದ 7 ನೇ ಕ್ರಮಾಂಕದ ಚೀನಾದ ತೈಪೆಯ ಲಿನ್ ಯುನ್- ಜು ವಿರುದ್ಧ ಸೋತರು.
ಕೊರೊನಾ ಮಹಾಮಾರಿಯಿಂದಾಗಿ ಕಳೆದೊಂದು ವರ್ಷದ ವಿರಾಮದ ಬಳಿಕ ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಆಡಿದ್ದು, ಉನ್ನತ ಶ್ರೇಣಿಯ ಯುನ್ -ಜು ವಿರುದ್ಧ ಮೊದಲು ಉತ್ತಮ ಪ್ರದರ್ಶನವನ್ನು ನೀಡಿದರಾದರೂ ವೇಗವನ್ನು ಪಡೆಯಲು ಸಾಧ್ಯವಾಗಲಿಲ್ಲ.