ಕರ್ನಾಟಕ

karnataka

ETV Bharat / sports

ಯುಎಸ್ ಓಪನ್​ನಲ್ಲಿ ಭಾಗವಹಿಸುವೆ: ನೊವಾಕ್ ಜೊಕೊವಿಕ್ ಸ್ಪಷ್ಟನೆ

ಯುಎಸ್ ಓಪನ್ ಟೆನಿಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ವಿಶ್ವದ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ತಿಳಿಸಿದ್ದಾರೆ.

By

Published : Aug 14, 2020, 9:35 AM IST

Novak Djokovic to play at US Open
ನೊವಾಕ್ ಜೊಕೊವಿಕ್

ನವದೆಹಲಿ: ಕೊರೊನಾ ವೈರಸ್ ಭೀತಿಯ ನಡುವೆ ಆಯೋಜನೆ ಆಗಿರುವ ಯುಎಸ್ ಓಪನ್ ಟೆನಿಸ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್‌ ಖಚಿತಪಡಿಸಿದ್ದಾರೆ.

ನಾನು ಈ ವರ್ಷ ಯುಎಸ್ ಓಪನ್ ನಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಎಲ್ಲ ಅಡೆತಡೆಗಳು ಮತ್ತು ಸವಾಲುಗಳನ್ನು ಎದುರಿಸುವುದು ಸುಲಭದ ನಿರ್ಧಾರವಲ್ಲ. ಆದರೆ, ಮತ್ತೆ ಸ್ಪರ್ಧಿಸುವ ನಿರೀಕ್ಷೆಯು ನನ್ನನ್ನು ನಿಜವಾಗಿಯೂ ಉತ್ಸುಕಗೊಳಿಸುತ್ತದೆ, ಎಂದು ಜೊಕೊವಿಕ್ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ಅವರು ಯುಎಸ್ ಓಪನ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದರು. ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ಕೂಡ ಮುಂಬರುವ ಯುಎಸ್ ಓಪನ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.

"ಅನೇಕ ಆಲೋಚನೆಗಳ ನಂತರ, ಈ ವರ್ಷದ ಯುಎಸ್ ಓಪನ್ ಆಡದಿರಲು ನಾನು ನಿರ್ಧರಿಸಿದ್ದೇನೆ. ವಿಶ್ವಾದ್ಯಂತ ಪರಿಸ್ಥಿತಿ ತುಂಬಾ ಜಟಿಲವಾಗಿದೆ, ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ, ಸದ್ಯಕ್ಕೆ ಅದನ್ನು ನಿಯಂತ್ರಿಸಲಾಗುತ್ತಿಲ್ಲ ಎಂದು ತೋರುತ್ತಿದೆ" ಎಂದು ನಡಾಲ್ ಹೇಳಿದ್ದರು.

ಆದರೆ ಅಗ್ರ ಆಟಗಾರ ನೊವಾಕ್​ ಜೊಕೊವಿಕ್ ಮಾತ್ರ ತಾವು ಕ್ರೀಡಾಕೂಟದಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದಾರೆ.

ABOUT THE AUTHOR

...view details