ಬ್ರಿಸ್ಬೇನ್: ಆಸ್ಟ್ರೇಲಿಯಾದ ವಿಶ್ವ ಟೆನಿಸ್ನ ನಂಬರ್ ಒನ್ ಆಟಗಾರ್ತಿಯಾಗಿರುವ ಆಶ್ಲೇ ಬಾರ್ಟಿ 2020ರ ಯುಎಸ್ ಓಪನ್ನಿಂದ ಹಿಂದೆ ಸರಿದಿದ್ದಾರೆ. ಕೊರೊನ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ತೊಂದರೆ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಈ ಸಮಯದಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ನಲ್ಲಿ ನಡೆಯುವ ಟೂರ್ನಿಯಿಂದ ಹೊರಗುಳಿಯುವುದಾಗಿ ಟೆನಿಸ್ನ ಬಹುದೊಡ್ಡ ಹೆಸರಾಗಿರುವ 24 ವರ್ಷದ ಬಾರ್ಟಿ ಹೇಳಿದ್ದಾರೆ.
" ನಾನು ಮತ್ತು ನನ್ನ ತಂಡ ಈ ವರ್ಷ ಯುಎಸ್ , ಪಾಶ್ಚಿಮಾತ್ಯ ಮತ್ತು ದಕ್ಷಿಣ ಓಪನ್ ಟೂರ್ನಿಗಳಿಗೆ ಹೋಗದಿರಲು ನಿರ್ಧರಿಸಿದ್ದೇವೆ" ಎಂದು ಬಾರ್ಟಿ ಹೇಳಿಕೆ ನೀಡಿದ್ದಾರೆ.
ನಾನು ಎರಡು ಇವೆಂಟ್ಗಳನ್ನು ಇಷ್ಟಪಡುತ್ತೇನೆ. ಆದರೆ ಕೋವಿಡ್ 19 ಅಪಾಯಗಳಿವೆ. ಈ ಸಂದರ್ಭದಲ್ಲಿ ನನ್ನ ತಂಡ ಆ ಅಪಾಯದಲ್ಲಿಇರಲು ನಾನು ಬಯಸುವುದಿಲ್ಲ. ಯುಎಸ್ಟಿಎ ಟೂರ್ನಮೆಂಟ್ಗೆ ಶುಭ ಹಾರೈಸುತ್ತೇನೆ ಮತ್ತು ಮುಂದಿನ ವರ್ಷ ಯುಎಸ್ಗೆ ಮರಳಲು ನಾನು ಎದುರು ನೋಡುತ್ತೇನೆ ಎಂದಿದ್ದಾರೆ.
ಮೇ-ಜೂನ್ನಲ್ಲಿ ನಡೆಯಬೇಕಾಗಿದ್ದ ಯುಎಸ್ ಓಪನ್ ಕ್ಲೇ ಕೋರ್ಟ್ ಟೂರ್ನಿಯನ್ನು ಕೊರೊನಾವೈರಸ್ ಕಾರಣ ಸೆಪ್ಟೆಂಬರ್ 27ರ ಬಳಿಕ ಆರಂಭಿಸಲು ನಿರ್ಧರಿಸಲಾಗಿತ್ತು.