ಹೈದರಾಬಾದ್: ಟೆನ್ನಿಸ್ ವಿಶ್ವದ 2ನೇ ಶ್ರೇಯಾಂಕದ ಆಟಗಾರ್ತಿ ಸಿಮೋನಾ ಹಾಲೆಪ್ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ರೊಮೇನಿಯಾದ ಆಟಗಾರ್ತಿ ಕೆಲವು ರೋಗಲಕ್ಷಣಗಳನ್ನು ಹೊಂದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಿಂಬಲ್ಡನ್ ಚಾಂಪಿಯನ್ ಸಿಮೋನಾ ಹಾಲೆಪ್ಗೆ ಕೊರೊನಾ ಪಾಸಿಟಿವ್ - ಸಿಮೋನಾ ಹಾಲೆಪ್ ನ್ಯೂಸ್
2019ರ ವಿಂಬಲ್ಡನ್ ಚಾಂಪಿಯನ್ ಆಗಿರುವ ಹಾಲೆಪ್ ಕೋವಿಡ್ 19 ಭೀತಿಯಿಂದ 2020ರ ಯುಎಸ್ ಓಪನ್ನಿಂದ ಹೊರ ಬಂದಿದ್ದರು. ಆದರೆ, ಫ್ರೆಂಚ್ ಓಪನ್ನಲ್ಲಿ ಭಾಗವಹಿಸಿದ್ದರೂ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಇಗಾ ಸ್ವಿಯಾಟೆಕ್ ವಿರುದ್ಧ ಸೋಲನುಭವಿಸಿ ಹೊರಬಿದ್ದಿದ್ದರು.
![ವಿಂಬಲ್ಡನ್ ಚಾಂಪಿಯನ್ ಸಿಮೋನಾ ಹಾಲೆಪ್ಗೆ ಕೊರೊನಾ ಪಾಸಿಟಿವ್ ವಿಂಬಲ್ಡನ್ ಚಾಂಪಿಯನ್ ಸಿಮೋನಾ ಹಾಲೆಪ್ಗೆ ಕೊರೊನಾ](https://etvbharatimages.akamaized.net/etvbharat/prod-images/768-512-9383494-438-9383494-1604155495436.jpg)
ತಮಗೆ ಕೋವಿಡ್ ಸೋಂಕು ತಗುಲಿರುವ ವಿಚಾರವನ್ನು ಹಾಲೆಪ್ ಟ್ವಿಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. "ಎಲ್ಲರಿಗೂ ನಮಸ್ಕಾರ, ನನಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿಸಲು ಬಯಸುತ್ತೇನೆ. ಪ್ರಸ್ತುತ ಸೆಲ್ಫ್ ಐಸೊಲೇಸನ್ನಲ್ಲಿದ್ದು, ಸಣ್ಣಪುಟ್ಟ ರೋಗದ ಲಕ್ಷಣಗಳಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ " ಎಂದು ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.