ಲಂಡನ್: ಸ್ವಿಟ್ಜರ್ಲೆಂಡ್ನ ಸ್ಟಾರ್ ಟೆನ್ನಿಸ್ ಆಟಗಾರ ಸ್ಟ್ಯಾನ್ ವಾವ್ರಿಂಕಾ, 2019ನೇ ವಿಂಬಲ್ಡನ್ ಟೂರ್ನಿಯಲ್ಲಿ ಅಮೆರಿಕದ ರೀಲಿ ಒಪೆಲ್ಕಾ ಅವರ ವಿರುದ್ದ ಸೋಲು ಕಂಡಿದ್ದಾರೆ.
ವಿಂಬಲ್ಡನ್ನಲ್ಲಿ ಸ್ಟ್ಯಾನ್ ವಾವ್ರಿಂಕಾಗೆ ನಿರಾಸೆ.. ಒಪೆಲ್ಕಾ ವಿರುದ್ಧ ಸೋತು ಹೊರಬಿದ್ದ ಸ್ವಿಸ್ ಆಟಗಾರ - ಗ್ರ್ಯಾಂಡ್ಸ್ಲಾಮ್
ಮೂರು ಬಾರಿ ಗ್ರ್ಯಾಂಡ್ಸ್ಲಾಮ್ ವಿಜೇತ ವಾವ್ರಿಂಕಾ ವಿಂಬಲ್ಡನ್ ಟೂರ್ನಿಯಲ್ಲಿ ಅಮೆರಿಕದ ರೀಲಿ ಒಪೆಲ್ಕಾ ಅವರ ವಿರುದ್ಧ ನಿರಾಸೆ ಅನುಭವಿಸಿದ್ದಾರೆ.
ವಿಂಬಲ್ಡನ್ನಲ್ಲಿ ಸ್ಟ್ಯಾನ್ ವಾವ್ರಿಂಕಾಗೆ ನಿರಾಸೆ
ಮೂರು ಬಾರಿ ಗ್ರ್ಯಾಂಡ್ಸ್ಲಾಮ್ ವಿಜೇತ ವಾವ್ರಿಂಕಾಗೆ ಎರಡನೇ ಸುತ್ತಿನಲ್ಲಿ ಅಮೆರಿಕಾದ ಒಪೆಲ್ಕಾ ಶಾಕ್ ನೀಡಿದ್ದಾರೆ. 21 ವರ್ಷ ವಯಸ್ಸಿನ ಒಪೆಲ್ಕಾ, 34 ವರ್ಷದ ವಾವ್ರಿಂಕಾ ಅವರನ್ನ 7–5, 3–6, 4–6, 6–4, 8–6 ಸೆಟ್ಗಳ ಅಂತರದಿಂದ ಸೋಲುಣಿಸಿದ್ದಾರೆ.
ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಆಗಿದ್ದ ವಾವ್ರಿಂಕಾ ವಿಂಬಲ್ಡನ್ನಲ್ಲಿ ಒಂದು ಬಾರಿಯೂ ಕ್ವಾರ್ಟರ್ಫೈನಲ್ ಹಂತ ತಲುಪಿಲ್ಲ. ಈ ಬಾರಿ ಕೂಡ ವಾವ್ರಿಂಕಾ, ಅಮೆರಿಕದ ಒಪೆಲ್ಕಾ ವಿರುದ್ಧ ನಿರಾಸೆ ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.