ಕರ್ನಾಟಕ

karnataka

ETV Bharat / sports

ವೃತ್ತಿ ಜೀವನದ 1000ನೇ ಪಂದ್ಯದಲ್ಲಿ ಸೋಲು ಕಂಡ ಸೆರೆನಾ ವಿಲಿಯಮ್ಸ್​

ಇಟಾಲಿಯನ್ ಓಪನ್​ನ ದ್ವಿತೀಯ ಸುತ್ತಿನಲ್ಲಿ ಸೆರೆನಾ ವಿಲಿಯಮ್ಸ್​, ಅಮೆರಿಕನ್ ಸ್ಟಾರ್, ಅರ್ಜೆಂಟೀನಾದ ನದಿಯಾ ಪೊಡೊರೊಸ್ಕಾ ವಿರುದ್ಧ 7-6(6) 7-5 ರಲ್ಲಿ ಸೋಲು ಕಂಡರು.

ಸೆರೆನಾ ವಿಲಿಯಮ್ಸ್​ಗೆ ಸೋಲು
ಸೆರೆನಾ ವಿಲಿಯಮ್ಸ್​ಗೆ ಸೋಲು

By

Published : May 13, 2021, 3:34 PM IST

ರೋಮ್: ಇಟಾಲಿಯನ್​ ಓಪನ್​ನಲ್ಲಿ ಸೆರೆನಾ ವಿಲಿಯಮ್ಸ್ ತಮ್ಮ ವೃತ್ತಿ ಜೀವನದ 1000ನೇ ಪಂದ್ಯದ ಕಣಕ್ಕಿಳಿದಿದ್ದರು. ಆದರೆ, ತಮ್ಮ ಜೀವನದ ಐತಿಹಾಸಿಕ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ಇಟಾಲಿಯನ್ ಓಪನ್​ನ ದ್ವಿತೀಯ ಸುತ್ತಿನಲ್ಲಿ ಅಮೆರಿಕನ್ ಸ್ಟಾರ್, ಅರ್ಜೆಂಟೀನಾದ ನದಿಯಾ ಪೊಡೊರೊಸ್ಕಾ ವಿರುದ್ಧ 7-6(6), 7-5 ರಲ್ಲಿ ಸೋಲು ಕಂಡರು.

ಆಸ್ಟ್ರೇಲಿಯಾ ಓಪನ್​ ನಂತರ ಯಾವುದೇ ಸ್ಪರ್ಧಾತ್ಮಕ ಟೂರ್ನಿಯಲ್ಲಿ ಕಾಣಿಸಿಕೊಳ್ಳದ ವಿಲಿಯಮ್ಸ್, ಟೂರ್ನಿಯಲ್ಲಿ 8ನೇ ಶ್ರೇಯಾಂಕ ಪಡೆದುಕೊಂಡಿದ್ದರು. ಮೊದಲ ಸೆಟ್​ನಲ್ಲಿ ಎರಡು ಬಾರಿ ಸರ್ವ್​ ಕಳೆದುಕೊಂಡಿದ್ದರು. ಆದರೂ ಗೆಲುವಿಗಾಗಿ ಟೈ ಬ್ರೇಕರ್ ಮೊರೆ ಹೋಗಬೇಕಾಯಿತು. ಕೊನೆಗೆ 1 ಗಂಟೆ, 58 ನಿಮಿಷ ನಡೆದ ಕಾದಾಟದಲ್ಲಿ ಅರ್ಜೆಂಟೀನಾ ಆಟಗಾರ್ತಿ ಗೆಲುವು ಪಡೆದರು.

ಇನ್ನು ಎರಡನೇ ಸೆಟ್​ನಲ್ಲಿ ಪೊಡೊರೊಸ್ಕಾ 5-2ರಲ್ಲಿ ಮುನ್ನಡೆ ಸಾಧಿಸಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ, ವಿಲಿಯಮ್ಸ್​ ಎದುರಾಳಿಯ ಸರ್ವ್​ ಬ್ರೇಕ್​ ಮಾಡಿದರು. ಆದರೆ, 12ನೇ ಗೇಮ್​ನಲ್ಲಿ ಪೊಡೊರೊಸ್ಕಾ ಗೆಲ್ಲುವ ಮೂಲಕ ವೃತ್ತಿ ಜೀವನದಲ್ಲಿ ಮೂರನೇ ಬಾರಿ ಟಾಪ್​ 10ರಲ್ಲಿರುವ ಆಟಗಾರ್ತಿಯನ್ನು ಮಣಿಸಿದ ಗೌರವಕ್ಕೆ ಪಾತ್ರರಾದರು.

ಹಾಲಿ ಚಾಂಪಿಯನ್ ಹಾಲೆಪ್​ 6-1, 3-3ರಲ್ಲಿ ಲೀಡ್​ ಪಡೆದುಕೊಂಡಿದ್ದ ವೇಳೆ ಗಾಯಗೊಂಡು ನಿವೃತ್ತಿಗೊಂಡರೆ, 2ನೇ ಶ್ರೇಯಾಂಕದ ನವೋಮಿ ಒಸಾಕ ಅಮೆರಿಕದ ಜಸ್ಸಿಕಾ ಪೆಗುಲಾ ವಿರುದ್ಧ 7-6(2), 6-2ರಲ್ಲಿ ಸೋಲು ಕಂಡರು. 4ನೇ ಶ್ರೇಯಾಂಕದ ಸೋಫಿಯಾ ಕೆನ್​ ಕೂಡ 6-1, 6-4ರಲ್ಲಿ ಬಾರ್ಬೊರಾ ಕ್ರೆಜ್ಕೋವಾ ವಿರುದ್ಧ ಸೋತರು.

ಅಗ್ರ ಶ್ರೇಯಾಂಕದ ಆಶ್ಲೇ ಬಾರ್ಟಿ ಮತ್ತು ಮಾಜಿ ಚಾಂಪಿಯನ್ ಕರೊಲಿನಾ ಪ್ಲಿಸ್ಕೋವಾ ನೇರ ಸೆಟ್​ಗಳ ಜಯ ಸಾಧಿಸಿ 3ನೇ ಸುತ್ತು ಪ್ರವೇಶಿಸಿದ್ದಾರೆ.

ಇದನ್ನು ಓದಿ: ಐಸಿಸಿ ಟೆಸ್ಟ್​ ರ‍್ಯಾಂಕಿಂಗ್: ಅಗ್ರಸ್ಥಾನ ಉಳಿಸಿಕೊಂಡ ಕೊಹ್ಲಿ ಪಡೆ

ABOUT THE AUTHOR

...view details