ಬ್ಯೂನಸ್ ಐರಿಸ್ (ಅರ್ಜೆಂಟೀನಾ): ಭಾರತದ ಉದಯೋನ್ಮುಖ ಟೆನಿಸ್ ಆಟಗಾರ ಸುಮಿತ್ ನಗಾಲ್ ಅರ್ಜೆಂಟೀನಾ ಓಪನ್ನಲ್ಲಿ ವೃತ್ತಿ ಜೀವನದ ಶ್ರೇಷ್ಠ ಜಯ ಸಾಧಿಸಿದ್ದಾರೆ. ಅವರು ವಿಶ್ವದ 22ನೇ ಶ್ರೇಯಾಂಕದ ಕ್ರಿಸ್ಚಿಯನ್ ಗ್ಯಾರಿಂಟೋ ಅವರನ್ನು ಮಣಿಸಿ ಅಚ್ಚರಿ ಮೂಡಿಸಿದ್ದಾರೆ.
ಎಟಿಪಿ ಶ್ರೇಯಾಂಕದಲ್ಲಿ 150ನೇ ಸ್ಥಾನದಲ್ಲಿರುವ ಸುಮಿತ್, ಅರ್ಜೆಂಟೀನಾ ಓಪನ್ನಲ್ಲಿ 2ನೇ ಶ್ರೇಯಾಂಕ ಪಡೆದಿದ್ದ ಚಿಲಿಯ ಕ್ರಿಸ್ಚಿಯನ್ ಗ್ಯಾರಿಂಟೋ ಅವರನ್ನು 6-4, 6-3 ರಲ್ಲಿ ಮಣಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.