ಮೆಲ್ಬೋರ್ನ್:ಆಸ್ಟ್ರೇಲಿಯನ್ ಓಪನ್ ಮೂಲಕ ತಮ್ಮ 24 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗೆ ಹೋರಾಡುತ್ತಿರುವ ಅಮೆರಿಕದ ಸೆರೆನಾ ವಿಲಿಯಮ್ಸ್ ಟೂರ್ನಿಯ ಮೊದಲ ಪಂದ್ಯದಲ್ಲೇ ಗೆಲುವಿನ ಅಭಿಯಾನ ಆರಂಭಿಸಿದ್ದಾರೆ.
24 ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲುವಿನತ್ತ ಸೆರೆನಾ ಚಿತ್ತ ಮೊದಲ ಪಂದ್ಯದಲ್ಲಿ ಜರ್ಮನಿಯ ಲಾರಾ ಸಿಗ್ಮೆಂಡ್ ವಿರುದ್ಧ ಸೆರೆನಾ ವಿಲಿಯಮ್ಸ್ 6-1, 6-1ರಿಂದ ಸುಲುಭ ಜಯಗಳಿಸಿದರು. ಸಿಗ್ಮೆಂಡ್ ವಿರುದ್ಧ ಕೇವಲ 56 ನಿಮಿಷಗಳಲ್ಲಿ ಗೆಲುವು ಪಡೆದರು.
ಇಲ್ಲಿಯವರೆಗೂ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯಲ್ಲಿ ಏಳು ಬಾರಿ ಮೊದಲ ಪಂದ್ಯದಲ್ಲಿ ಗೆಲವು ಸಾಧಿಸಿದ್ದಾರೆ. 20 ನೇ ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್ ಭಾಗವಹಿಸಿದ್ದು, ಈ ಪಂದ್ಯ ಅವರ ವೃತ್ತಿಜೀವನದ 100 ನೇ ಪಂದ್ಯವಾಗಿತ್ತು.
ಓದಿ : ಆಸ್ಟ್ರೇಲಿಯಾ ಓಪನ್.. ಗ್ರ್ಯಾಂಡ್ ಸ್ಲ್ಯಾಮ್ ಮುಖ್ಯ ಘಟ್ಟಕ್ಕೆ ಲಗ್ಗೆ ಇಟ್ಟ ಭಾರತದ 3ನೇ ಮಹಿಳೆ ಅಂಕಿತಾ ರೈನಾ..