ಕರ್ನಾಟಕ

karnataka

ETV Bharat / sports

ಸೆಮಿಫೈನಲ್​ನಲ್ಲಿ ಸೋತು ಕಣ್ಣೀರಿಟ್ಟ ಸೆರೆನಾ ವಿಲಿಯಮ್ಸ್​: ವಿಡಿಯೋ

39 ವರ್ಷದ ಸೆರೆನಾ ಇನ್ನೊಂದು ಗ್ರ್ಯಾಂಡ್​ ಸ್ಲಾಮ್​ ಗೆದ್ದರೆ ಆಸ್ಟ್ರೇಲಿಯಾದ ಮಾರ್ಗರೇಟ್​ ಕೋರ್ಟ್​ ಅವರ 24 ಗ್ರ್ಯಾಂಡ್​ ಸ್ಲಾಮ್​ ವಿಶ್ವದಾಖಲೆಯನ್ನು ಸರಿಗಟ್ಟಲಿದ್ದರು. ಆದರೆ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕದ ನವೋಮಿ ಒಸಾಕ ವಿರುದ್ಧ 3-6, 4-6ರಲ್ಲಿ ಸೋಲು ಕಂಡು ನಿರಾಸೆಯನುಭವಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್​ನಲ್ಲಿ ಸೆರೆನಾ ವಿಲಿಯಮ್ಸ್​
ಆಸ್ಟ್ರೇಲಿಯನ್ ಓಪನ್​ನಲ್ಲಿ ಸೆರೆನಾ ವಿಲಿಯಮ್ಸ್​

By

Published : Feb 18, 2021, 3:04 PM IST

ಮೆಲ್ಬೋರ್ನ್​: ಅಮೆರಿಕಾದ ಪ್ರಸಿದ್ಧ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್​ ಆಸ್ಟ್ರೇಲಿಯನ್ ಓಪನ್​ ಸೆಮಿಫೈನಲ್​ ಪಂದ್ಯದಲ್ಲಿ ಜಪಾನ್​ನ ನವೋಮಿ ಒಸಾಕ ವಿರುದ್ಧ ಸೋತು ನಿರಾಸೆಯನುಭವಿಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟರು.

39 ವರ್ಷದ ಸೆರೆನಾ ಇನ್ನೊಂದು ಗ್ರ್ಯಾಂಡ್​ ಸ್ಲಾಮ್​ ಗೆದ್ದರೆ ಆಸ್ಟ್ರೇಲಿಯಾದ ಮಾರ್ಗರೇಟ್​ ಕೋರ್ಟ್​ ಅವರ 24 ಗ್ರ್ಯಾಂಡ್​ ಸ್ಲಾಮ್​ ವಿಶ್ವದಾಖಲೆಯನ್ನು ಸರಿಗಟ್ಟಲಿದ್ದರು. ಆದರೆ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕದ ನವೋಮಿ ಒಸಾಕ ವಿರುದ್ಧ 3-6, 4-6ರಲ್ಲಿ ಸೋಲು ಕಂಡು ನಿರಾಸೆಯನುಭವಿಸಿದ್ದಾರೆ.

2-0ಯಲ್ಲಿ ಮುನ್ನಡೆ ಸಾಧಿಸಿದ ನಂತರವೂ ಸೋಲಿಗೆ ಮಾಡಿದ ಎಡವಟ್ಟುಗಳೇನು ಎಂದು ಕೇಳಿದ್ದಕ್ಕೆ, 'ನನಗೆ ಗೊತ್ತಿಲ್ಲ, ನಾನು ಹಲವಾರು ತಪ್ಪುಗಳನ್ನು ಮಾಡಿದೆ' ಎಂದು ಕಣ್ಣೀರಿಡುತ್ತಾ ಪತ್ರಿಕಾಗೋಷ್ಠಿಯಿಂದ ಹೊರ ನಡೆದರು. ಈ ಪಂದ್ಯದಲ್ಲಿ ಸೆರೆನಾ 24 ತಪ್ಪುಗಳನ್ನು ಮಾಡಿ ಅಂಕ ಬಿಟ್ಟುಕೊಟ್ಟರೆ, ಒಸಾಕ ಕೇವಲ 6 ಅಂಕಗಳನ್ನು ಮಾತ್ರ ತಮ್ಮ ತಪ್ಪುಗಳಿಗಾಗಿ ಬಿಟ್ಟುಕೊಟ್ಟರು.

ಇಂದಿನ ಪಂದ್ಯದಲ್ಲಿನ ವ್ಯತ್ಯಾಸವೆಂದರೆ ದೋಷಗಳು ಮಾತ್ರ. ನಾನು ಇಂದು ಅನೇಕ ತಪ್ಪುಗಳನ್ನು ಎಸಗಿದ್ದೇನೆ. ನಾನು 5-0 ಅಂತರದಲ್ಲಿರಬಹುದಾದ ಅವಕಾಶವನ್ನು ಕೈಚೆಲ್ಲಿದೆ, ಅಲ್ಲದೆ ತುಂಬಾ ಸುಲಭದ ದೋಷಗಳನ್ನು ಮಾಡಿದ್ದೇನೆ. ಅದರಲ್ಲೂ ಫೋರ್‌ಹ್ಯಾಂಡ್ ಬಲವಂತದ ದೋಷಗಳಾಗಿದ್ದು, ಸೋಲಿಗೆ ಕಾರಣವಾಯಿತು ಎಂದು ಅವರು ಹೇಳಿದರು.

"ಇಡೀ ಪಂದ್ಯಾವಳಿಯಲ್ಲಿ ಚೆನ್ನಾಗಿ ಆಡಿದ್ದೆ. ಈ ಪಂದ್ಯದ ಮೊದಲ ಎರಡು ಗೇಮ್​ಗಳಲ್ಲಿ ನಾನು ಚೆನ್ನಾಗಿ ಆಡಿದ್ದೆ, ಅಲ್ಲದೆ ನನಗೆ ಹಲವು ಅವಕಾಶಗಳಿದ್ದವು. ಆದರೆ ಏನಾಯಿತೋ ಗೊತ್ತಿಲ್ಲ ... ಆ ಹಂತದಲ್ಲಿ ಹಲವಾರು ತಪ್ಪು ಮಾಡಿದೆ. ಅವೆಲ್ಲವೂ ಸುಲಭವಾದ ತಪ್ಪುಗಳು" ಎಂದು ಅವರು ಭಾವುಕರಾಗಿ ಹೇಳಿದರು.

ABOUT THE AUTHOR

...view details