ಪ್ಯಾರಿಸ್: ಭಾನುವಾರ ನಡೆದ ಮ್ಯಾರಥಾನ್ ಫ್ರೆಂಚ್ ಓಪನ್ ಫೈನಲ್ನಲ್ಲಿ ಗ್ರೀಕ್ನ ಸ್ಟೆಫನೋಸ್ ಸಿಟ್ಸಿಪಾಸ್ ಅವರನ್ನು 5 ಸೆಟ್ಗಳ ಪಂದ್ಯದಲ್ಲಿ ಮಣಿಸಿ 19ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಎತ್ತಿ ಹಿಡಿದರು. ಈ ಮೂಲಕ ಎಲ್ಲ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗಳನ್ನು ತಲಾ 2 ಬಾರಿ ಗೆದ್ದಿರುವ ಸಕ್ರಿಯ ಟೆನಿಸ್ ಪಟು ಎಂಬ ದಾಖಲೆಗೆ ಜೋಕೊವಿಕ್ ಪಾತ್ರರಾದರು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 6-7(6-8), 2-6 ರಲ್ಲಿ ಮೊದಲೆರಡು ಸೆಟ್ಗಳಲ್ಲಿ ಜೋಕೊವಿಕ್ ಸೋಲು ಕಂಡರು. ಆದರೆ, ಹೋರಾಟದ ಮನೋಭಾವ ಬಿಡದ ಜೋಕೊವಿಕ್ ಸತತ ಮೂರು ಸೆಟ್ಗಳನ್ನು 6-3, 6-2, 6-4 ರಲ್ಲಿ ಗೆದ್ದು ವೃತ್ತಿ ಜೀವನದ 19ನೇ ಗ್ರ್ಯಾಂಡ್ ಸ್ಲಾಮ್ ಮತ್ತು 2ನೇ ಫ್ರೆಂಚ್ ಓಪನ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಆದರೆ, ಮೊದಲೆರಡು ಸೆಟ್ಗಳನ್ನು ಸೋಲು ಕಂಡಾಗಲೂ ಪುಟ್ಟ ಬಾಲಕನೊಬ್ಬ ಸರ್ಬಿಯನ್ ಸ್ಟಾರ್ರನ್ನು ಹುರಿದುಂಬಿಸುತ್ತಿದ್ದನು. ಪಂದ್ಯ ಪೂರ್ತಿ ತಮ್ಮನ್ನು ಬೆಂಬಲಿಸಿದ ಆ ಬಾಲಕನಿಗೆ ಈ ಪಂದ್ಯದಲ್ಲಿ ತಾವೂ ಉಪಯೋಗಿಸಿದ ರಾಕೆಟ್ ಅನ್ನು ಜೋಕೊವಿಕ್ ಆ ಬಾಲಕನಿಗೆ ಉಡುಗೊರೆ ನೀಡಿದರು. ಇದನ್ನು ನಂಬಲು ಸಾಧ್ಯವಿಲ್ಲ ಎನ್ನುವಂತೆ ಆ ಬಾಲಕ ಬಾವುಕನಾಗಿ ತಮ್ಮ ಕುಟುಂಬದವರ ಜೊತೆ ಸಂಭ್ರಮಿಸಿದ್ದ ವಿಡಿಯೋ ಭಾರಿ ವೈರಲ್ ಆಗುತ್ತಿದೆ.