ಮೆಲ್ಬೋರ್ನ್: ಯುಎಸ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಡೊಮಿನಿಕ್ ಥೀಮ್ ಅವರು ಇದೀಗ ಆಸ್ಟ್ರೇಲಿಯಾ ಓಪನ್ನ ಮೂರನೇ ಸುತ್ತಿಗೆ ಪಾದಾರ್ಪಣೆ ಮಾಡಿದ್ದಾರೆ.
ಮೆಲ್ಬೋರ್ನ್ನ ಮಾರ್ಗರೆಟ್ ಕೋರ್ಟ್ ಅರೆನಾದಲ್ಲಿ ಜರ್ಮನಿಯ ಡೊಮಿನಿಕ್ ಕೊಯೆಫರ್ ವಿರುದ್ಧ ಸುಲಭ ಜಯ ಸಾಧಿಸಿದರು. ಡೊಮಿನಿಕ್ ಅವರು ತನ್ನ ಎದುರಾಳಿಯನ್ನು ಮೂರು ನೇರ ಸೆಟ್‌ಗಳ ಅಂತರದಲ್ಲಿ (6-4, 6-0, 6-2) ಒಂದು ಗಂಟೆ 39 ನಿಮಿಷಗಳಲ್ಲಿ ಸೋಲಿಸಿದರು.
ಇದನ್ನು ಓದಿ: ಆಸ್ಟ್ರೇಲಿಯನ್ ಓಪನ್.. ಟಿಯಾಫೋ ಮಣಿಸಿ 3ನೇ ಸುತ್ತು ಪ್ರವೇಶಿಸಿದ ಜೋಕೊವಿಕ್..
ಮೊದಲ ಸೆಟ್ ಜರ್ಮನಿ ಆಟಗಾರ ಡೊಮಿನಿಕ್ ಕೊಯೆಫರ್ ಅವರು ವಿಶ್ವದ 3ನೇ ಕ್ರಮಾಂಕದ ಡೊಮಿನಿಕ್ ಥೀಮ್ಗೆ ತೀವ್ರ ಪೈಪೋಟಿ ನೀಡಿದರು. ಆದರೆ ಎರಡು ಮತ್ತು ಮೂರನೇ ಸೆಟ್ನಲ್ಲಿ ಮಾತ್ರ ಥೀಮ್ ಅವರು ಜಯಸಾಧಿಸಿದರು.
ಥೀಮ್ ಅವರು ಮುಂಬರುವ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ಅಥವಾ ಫ್ರಾನ್ಸ್ನ 29 ನೇ ಶ್ರೇಯಾಂಕಿತ ಉಗೊ ಹಂಬರ್ಟ್ ಅವರನ್ನು ಎದುರಿಸಲಿದ್ದಾರೆ.