ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ಓಪನ್​: ದ್ವಿತೀಯ ಶ್ರೇಯಾಂಕದ ಹಾಲೆಪ್​ ವಿರುದ್ಧ ಗೆದ್ದು ಸೆಮಿಫೈನಲ್​ಗೆ ಎಂಟ್ರಿ ಕೊಟ್ಟ ಸೆರೆನಾ - ಸೆರೆನಾ ವಿಲಿಯಮ್ಸ್ ಲೇಟೆಸ್ಟ್​ ನ್ಯೂಸ್​

24ನೇ ಗ್ರ್ಯಾಂಡ್​ಸ್ಲಾಮ್​ ಗೆಲ್ಲುವ ಕನಸಿನಲ್ಲಿರುವ ಸೆರೆನಾ ವಿಲಿಯಮ್ಸ್​ ಮಂಗಳವಾರದ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಹಾಲೆಪ್ ವಿರುದ್ಧ 6-3, 6-3 ನೇರ ಸೆಟ್​ಗಳ ಅಂತರದಲ್ಲಿ ಗೆಲುವು ಸಾಧಿಸಿ ನಾಕೌಟ್ ಪ್ರವೇಶಿಸಿದರು.

ಆಸ್ಟ್ರೇಲಿಯಾ ಓಪನ್ 2021
ಲೆಪ್​ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಸೆರೆನಾ

By

Published : Feb 16, 2021, 4:37 PM IST

ಮೆಲ್ಬೋರ್ನ್​:ಅಮೆರಿಕದ ಟೆನ್ನಿಸ್​ ಸ್ಟಾರ್​ ಸೆರೆನಾ ವಿಲಿಯಮ್ಸ್ ಮಂಗಳವಾರ ವಿಶ್ವ ಟೆನ್ನಿಸ್​ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿರುವ ರೋಮೆನಿಯಾದ ಸಿಮೋನಾ ಹಾಲೆಪ್​ ವಿರುದ್ಧದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.

24ನೇ ಗ್ರ್ಯಾಂಡ್​ಸ್ಲಾಮ್​ ಗೆಲ್ಲುವ ಕನಸಿನಲ್ಲಿರುವ ಸೆರೆನಾ ವಿಲಿಯಮ್ಸ್​ ಮಂಗಳವಾರದ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಹಾಲೆಪ್ ವಿರುದ್ಧ 6-3, 6-3 ನೇರ ಸೆಟ್​ಗಳ ಅಂತರದಲ್ಲಿ ಗೆಲುವು ಸಾಧಿಸಿ ನಾಕೌಟ್ ಪ್ರವೇಶಿಸಿದರು.

39 ವರ್ಷದ ಸೆರೆನಾ ಮೊದಲ ಸೆಟ್​ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದರರು. ಇದರ ಫಲ 6-3ರಲ್ಲಿ ಮೊದಲ ಸೆಟ್​ ಗೆದ್ದು ಕೊಂಡರು, ಈ ವೇಳೆ ಅವರು ಎದುರಾಳಿ ವಿರುದ್ಧ 14 ಅಂಕಗಳನ್ನು ಏಸ್​​ ಸಿಡಿಸುವ ಮೂಲಕ ಪಡೆದು ಕೊಂಡಿದ್ದು ವಿಶೇಷವಾಗಿತ್ತು.

ಸೆರೆನಾ ವಿಲಿಯಮ್ಸ್ vs ಸಿಮೋನಾ ಹಾಲೆಪ್​

ಎರಡನೇ ಸೆಟ್​ನಲ್ಲಿ ಹಾಲೆಪ್​ ಒಂದು ಹಂತದಲ್ಲಿ 3-1ರಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ, ಅದ್ಭುತವಾಗಿ ತಿರುಗಿ ಬಿದ್ದ ಸೆರೆನಾ ವಿಲಿಯಮ್ಸ್​ 3-3ಕ್ಕೆ ಸ್ಕೋರ್​ ಸಮಬಲ ಸಾಧಿಸಿದರು. ನಂತರ ಅದೇ ಅಂತರವನ್ನು ಮುಂದುವರಿಸಿದ ಅವರದು ಎದುರಾಳಿಗೆ ಹಿಂತಿರುಗಲು ಅವಕಾಶ ನೀಡದೇ 6-3ರಲ್ಲಿ ಸೆಟ್​ ಜೊತೆಗೆ ಪಂದ್ಯ ಗೆದ್ದುಕೊಂಡರು.

ಈಗಾಗಲೇ 23 ಪಂದ್ಯಗಳನ್ನು ಗೆದ್ದಿರುವ ಸೆರೆನಾ ಇನ್ನೊಂದು ಗ್ರ್ಯಾಂಡ್​ ಸ್ಲಾಮ್​ ಗೆದ್ದರೆ ಅತಿ ಹೆಚ್ಚು ಹೆಚ್ಚು ಗ್ರ್ಯಾಂಡ್​ ಗೆದ್ದಿರುವ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್​ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಸೆರೆನಾ 2017ರಲ್ಲಿ ಕೊನೆಯ ಬಾರಿ ಅವರ ಸಹೋದರಿ ವೀನಸ್​ ವಿಲಿಯಮ್ಸ್​ ಮಣಿಸಿ ಆಸ್ಟ್ರೇಲಿಯನ್ ಓಪನ್​ ಗೆದ್ದಿದ್ದರು.

ಇದನ್ನು ಓದಿ:ಪದಾರ್ಪಣೆ ಪಂದ್ಯದಲ್ಲೇ ಅಶ್ವಿನ್, ಮಿಶ್ರಾ ಲಿಸ್ಟ್​ ಸೇರಿದ ಅಕ್ಸರ್ ಪಟೇಲ್

ABOUT THE AUTHOR

...view details