ಮೆಲ್ಬೋರ್ನ್ :ಸ್ಪ್ಯಾನಿಷ್ ಟೆನಿಸ್ ಆಟಗಾರ ರಾಫೆಲ್ ನಡಾಲ್ ಅವರು ಇಟಲಿಯ ಫೆಬಿಯೋ ಫೊಗ್ನಿನಿ ಅವರನ್ನು ಮಣಿಸಿ 13ನೇ ಬಾರಿ ಆಸ್ಟ್ರೇಲಿಯನ್ ಓಪನ್ನಲ್ಲಿ ಕ್ವಾಟರ್ಫೈನಲ್ ತಲುಪಿದರು.
ಆಸ್ಟ್ರೇಲಿಯಾದ ಓಪನ್ 2009ರ ಚಾಂಪಿಯನ್ ಫೊಗ್ನಿನಿಯನ್ನು 6-3, 6-4, 6-2 ಸೆಟ್‌ಗಳಿಂದ ಸೋಲಿಸಿ 21ನೇ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಭರವಸೆಯನ್ನು ಜೀವಂತವಾಗಿರಿಸಿಕೊಂಡರು.
ಭಾನುವಾರ ವಿಶ್ವದ 4ನೇ ಕ್ರಮಾಂಕದ ಡ್ಯಾನಿಲ್ ಮೆಡ್ವೆಡೆವ್ ಯುಎಸ್ಎ ಟೆನಿಸ್ ಆಟಗಾರ ಮ್ಯಾಕೆಂಜಿ ಮೆಕ್ಡೊನಾಲ್ಡ್ ಅವರನ್ನು 6-4, 6-2, 6-3 ಸೆಟ್‌ಗಳಿಂದ ಸೋಲಿಸುವ ಮೂಲಕ ಸತತ 18 ಪಂದ್ಯಗಳನ್ನು ಗೆದ್ದರು.
ರಾಫೆಲ್ ನಡಾಲ್ ಗೆಲುವಿನ ಕ್ಷಣಗಳು.. ಸೆರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್, ಮಿಲೋಸ್ ರಾವೊನಿಕ್ ವಿರುದ್ಧ ಜಯಗಳಿಸಿದ ನಂತರ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ರಾವೊನಿಕ್ ವಿರುದ್ಧ ಜೊಕೊವಿಕ್ 7-6, 4-6, 6-1, 6-4 ಅಂತರದ ಗೆಲುವು ಸಾಧಿಸಿದರು.
ಈ ಮೂಲಕ ಗ್ರ್ಯಾಂಡ್ ಸ್ಲಾಮ್ನಲ್ಲೇ 300 ಪಂದ್ಯಗಳಲ್ಲಿ ಗೆಲುವು ಸಾಧಿಸಿದರು. ರೋಜರ್ ಫೆಡರರ್ ನಂತರ 300 ಪಂದ್ಯಗಳಲ್ಲಿ ಗೆದ್ದ ಎರಡನೇ ಆಟಗಾರ ಎಂಬ ದಾಖಲೆ ಬರೆದರು.
ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆಯುವ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಜೊಕೊವಿಕ್ ವಿಶ್ವದ ನಂ.7 ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ.