ಮೆಲ್ಬೋರ್ನ್:ಟೆನ್ನಿಸ್ನಲ್ಲಿ ಏಷ್ಯಾದ ಪ್ರಬಲ ಸ್ಪರ್ಧಿಯಾಗಿರುವ ಜಪಾನಿನ ನವೋಮಿ ಒಸಾಕ ಆಸ್ಟ್ರೇಲಿಯನ್ ಓಪನ್ನಲ್ಲಿ 3ನೇ ಸುತ್ತು ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್ನ ಕರೋಲಿನ್ ಗಾರ್ಸಿಯಾ ವಿರುದ್ಧ 6-2, 6-3 ರಲ್ಲಿ ಸುಲಭ ಜಯ ದಾಖಲಿಸಿದರು. ಈ ಪಂದ್ಯವನ್ನು 3 ಗ್ರ್ಯಾಂಡ್ಸ್ಲಾಮ್ ವಿಜೇತ ಒಸಾಕ ಕೇವಲ 60 ನಿಮಿಷಗಳಲ್ಲಿ ನೇರ ಸೆಟ್ಗಳ ಅಂತರದಲ್ಲಿ ವಶಪಡಿಸಿಕೊಂಡರು.
ನವೋಮಿ ಒಸಾಕ vs ಕರೋಲಿನ್ ಗಾರ್ಸಿಯಾ ಒಸಾಕ ಸೋಮವಾರ ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಅನಸ್ತಾಸಿಯಾ ಪಾವ್ಲಿಚೆಂಕೊವಾ ಅವರನ್ನು 6-1, 6-2ರ ನೇರ ಸೆಟ್ಗಳಲ್ಲಿ ಮಣಿಸಿದ್ದರು.
ಇದಕ್ಕೂ ಮುನ್ನ ಅಮೆರಿಕಾದ ಸ್ಟಾರ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸರ್ಬಿಯಾದ ನಿನಾ ಸ್ಟೋಜನೋವಿಕ್ ವಿರುದ್ಧ 6-3, 6-0 ಗೆಲುವು ಸಾಧಿಸಿದರು. ಎರಡನೇ ಶ್ರೇಯಾಂಕದ ರೋಮೆನಿಯಾದ ಸಿಮೋನಾ ಹಾಲೆಪ್ 4-6,6-4,7-5ರಲ್ಲಿ ಆಸ್ಟ್ರೇಲಿಯಾದ ಅಜ್ಲಾ ತೊಮ್ಜನೊವಿಚ್ ವಿರುದ್ಧ ಗೆಲುವು ಸಾಧಿಸಿ 3ನೇ ಸುತ್ತು ಪ್ರವೇಶಿಸಿದರು.
ಪುರುಷರ ವಿಭಾಗದಲ್ಲಿ ಅಗ್ರ ಕ್ರಮಾಂಕದ ಜೋಕೊವಿಕ್ ಮತ್ತು ಡೊಮಿನಿಕ್ ಥೀಮ್ ಅಲೆಕ್ಸಾಂಡರ್ ಜ್ವರೆವ್ ಕೂಡ 3ನೇ ಸುತ್ತು ಪ್ರವೇಶಿಸಿದ್ದಾರೆ. ಶುಕ್ರವಾರ 3ನೇ ಸುತ್ತಿನ ಪಂದ್ಯಗಳು ನಡೆಯಲಿವೆ.