ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯನ್ ಓಪನ್ 2021: ವಿಶ್ವದ ನಂಬರ್​ 1 ಆಶ್ಲೇ ಬಾರ್ಟಿಗೆ ಸೋಲುಣಿಸಿದ ಮುಚೋವಾ - ಆಸ್ಟ್ರೇಲಿಯಾ ಓಪನ್​ ಕ್ವಾರ್ಟರ್​ ಫೈನಲ್​

ಬುಧವಾರ ರಾಡ್ ಲಾವರ್ ಅರೆನಾದಲ್ಲಿ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ 25ನೇ ಶ್ರೇಯಾಂಕದ ಮುಚೋವಾ 1-6, 6-3 , 6-2 ರಲ್ಲಿ ವಿಶ್ವದ ನಂ.1 ಆಟಗಾರ್ತಿಗೆ ಸೋಲುಣಿಸಿ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಗ್ರ್ಯಾಂಡ್​ ಸ್ಲಾಮ್​ ಸೆಮಿಫೈನಲ್​ ಪ್ರವೇಶಿಸಿದರು.

ಆಶ್ಲೇ ಬಾರ್ಟಿ vs ಕರೋಲಿನಾ ಮುಚೋವಾ
ಆಶ್ಲೇ ಬಾರ್ಟಿ vs ಕರೋಲಿನಾ ಮುಚೋವಾ

By

Published : Feb 17, 2021, 12:24 PM IST

ಮೆಲ್ಬೋರ್ನ್​:ವಿಶ್ವದ ನಂಬರ್​ 1 ಆಟಗಾರ್ತಿಯಾಗಿರುವ ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ ಆಸ್ಟ್ರೇಲಿಯನ್ ಓಪನ್​ನ ಕ್ವಾರ್ಟರ್​ ಫೈನಲ್​ನಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಬುಧವಾರ ರಾಡ್ ಲಾವರ್ ಅರೆನಾದಲ್ಲಿ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ 25ನೇ ಶ್ರೇಯಾಂಕದ ಮುಚೋವಾ 1-6, 6-3 , 6-2 ರಲ್ಲಿ ವಿಶ್ವದ ನಂ.1 ಆಟಗಾರ್ತಿಗೆ ಸೋಲುಣಿಸಿ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಗ್ರ್ಯಾಂಡ್​ ಸ್ಲಾಮ್​ ಸೆಮಿಫೈನಲ್​ ಪ್ರವೇಶಿಸಿದರು.

ಆಶ್ಲೇ ಬಾರ್ಟಿ vs ಕರೋಲಿನಾ ಮುಚೋವಾ

ಮುಚೋವ್​ ಉತ್ತಮವಾದ ಆರಂಭ ಪಡೆದಿರಲಿಲ್ಲ, ಅವರು ಮೊದಲ ಸುತ್ತಿನಲ್ಲೇ 1-6ರಲ್ಲಿ ಸೋಲು ಕಂಡರು, ಆದರೆ, ಆಶ್ಚರ್ಯಕರ ರೀತಿಯಲ್ಲಿ ತಿರುಗಿಬಿದ್ದ ಜೆಕ್​ ಆಟಗಾರ್ತಿ 2 ಮತ್ತು 3ನೇ ಸುತ್ತಿನಲ್ಲಿ 6-3, 6-2ರಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿದರು. ಮುಚೋವಾ ಸೆಮಿಫೈನಲ್​ ಕದನದಲ್ಲಿ ಅಮೆರಿಕದ ಜನಿಫರ್ ಬ್ರಾಡಿ ಅವರನ್ನು ಎದುರಿಸಲಿದ್ದಾರೆ.

ಇದಕ್ಕೂ ಮೊದಲು ಅಮೆರಿಕದ ಸೆರೆನಾ ವಿಲಿಯಮ್ಸ್ 2ನೇ ಶ್ರೇಯಾಂಕದ ಸಿಮೋನಾ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಅವರು ಜಪಾನ್​ನ ನವೋಮಿ ಒಸಾಕ ವಿರುದ್ಧ ಗುರುವಾರ ನಡೆಯುವ ಸೆಮಿಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದಾರೆ.

ಇದನ್ನು ಓದಿ: ಟೆಸ್ಟ್ ಫಾರ್ಮೆಟ್​ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ ಡು ಪ್ಲೆಸಿಸ್

ABOUT THE AUTHOR

...view details