ಮೆಲ್ಬೋರ್ನ್ :ಅಗ್ರ ಶ್ರೇಯಾಂಕದ ನೊವಾಕ್ ಜೋಕೊವಿಕ್ ಆಸ್ಟ್ರೇಲಿಯನ್ ಓಪನ್ನ 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕಾದ ಫ್ರಾನ್ಸಿಸ್ ಟಿಯಾಫೋ ವಿರುದ್ಧ ಜಯ ಸಾಧಿಸಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಟಿಯಾಫೋ ನಂಬರ್ ಒನ್ ಆಟಗಾರನಿಗೆ ತೀವ್ರ ಪೈಪೋಟಿ ನೀಡಿದರಾದರೂ ಚಾಂಪಿಯನ್ ಆಟಗಾರನ ಮುಂದೆ ಮೂರುವರೆ ಗಂಟೆ ನಡೆದ ಪಂದ್ಯದಲ್ಲಿ ಸೋಲು ಕಂಡರು. ಜೋಕೊವಿಕ್ 6-3, 6-7 (3), 7-6 (2), 6-3 ಅಂತರದಿಂದ ಮಣಿಸಿದರು.
ಮೊದಲ ಸೆಟ್ನ ಸುಲಭವಾಗಿ ಗೆದ್ದ ಜೋಕೊವಿಕ್ಗೆ ಎರಡನೇ ಸೆಟ್ನಲ್ಲಿ ತೀವ್ರ ಪೈಪೋಟಿ ನೀಡಿ ಟ್ರೈಬ್ರೇಕರ್ನಲ್ಲಿ ಟಿಯೋಫೋಗೆ ಶರಣಾದರು. ಮತ್ತೆ ಮೂರನೇ ಸುತ್ತು ಕೂಡ ಟ್ರೈ ಬ್ರೇಕರ್ ತಲುಪಿತ್ತಾದರೂ, ಜೋಕೊವಿಕ್ ಗೆಲುವು ಸಾಧಿಸಿದರು.