ನ್ಯೂಯಾರ್ಕ್ :ಟೆನಿಸ್ ಪ್ರಿಯರಿಗೆ ನ್ಯೂಯಾರ್ಕ್ ಗವರ್ನರ್ ಸಿಹಿ ಸುದ್ದಿ ನೀಡಿದ್ದಾರೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 13 ರವರೆಗೆ ಪ್ರತಿಷ್ಠಿತ ಯುಎಸ್ ಒಪನ್ ಟೆನಿಸ್ ಗ್ರಾಂಡ್ಸ್ಲಾಂ ಟೂರ್ನಿ ನಡೆಯಲಿದೆ ಎಂದು ಘೋಷಣೆ ಮಾಡಿದ್ದಾರೆ.
ಆಗಸ್ಟ್ನಲ್ಲಿ ಯುಎಸ್ ಓಪನ್ ಆರಂಭ: ನ್ಯೂಯಾರ್ಕ್ ಗವರ್ನರ್ ಘೋಷಣೆ - US Open Begin in August
ಆಟಗಾರರ ಸುರಕ್ಷತೆಗೆ ಎಲ್ಲ ಕ್ರಮಗಳನ್ನ ಕೈಗೊಂಡು ಯುಎಸ್ ಒಪನ್ ಟೆನಿಸ್ ಗ್ರಾಂಡ್ಸ್ಲಾಂ ಟೂರ್ನಿ ನಡೆಸುವುದಾಗಿ ಅಮೆರಿಕದ ನ್ಯೂಯಾರ್ಕ್ ಗವರ್ನರ್ ಆ್ಯಂಡ್ರೋ ಕುಮೊ ಘೋಷಣೆ ಮಾಡಿದ್ದಾರೆ.
ಆಟಗಾರರ ಸುರಕ್ಷತೆಗೆ ಎಲ್ಲ ಕ್ರಮಗಳನ್ನ ಕೈಗೊಂಡು ಟೂರ್ನಿ ನಡೆಸುವುದಾಗಿ ಅಮೆರಿಕದ ನ್ಯೂಯಾರ್ಕ್ ಗವರ್ನರ್ ಆ್ಯಂಡ್ರೋ ಕುಮೊ ಹೇಳಿದ್ದಾರೆ. ಈ ಪಂದ್ಯಾವಳಿಗಳು ಅಭಿಮಾನಿಗಳು ಪ್ರೇಕ್ಷಕರಿಲ್ಲದೇ ನಡೆಯಲಿದೆ, ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.
ಅಗತ್ಯ ಮುಂಜಾಗ್ರತೆ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ನ್ಯೂಯಾರ್ಕ್ ಗವರ್ನರ್ ಟ್ವೀಟ್ ಮಾಡಿದ್ದಾರೆ. ಗವರ್ನರ್ ಈ ಘೋಷಣೆ ಟೀಕೆಗಳಿಗೆ ಒಳಗಾಗಿದೆ. ಇನ್ನು ಅಮೆರಿಕ ಸರ್ಕಾರ ಟೂರ್ನಿ ಆಯೋಜನೆಗೆ ಹಸಿರು ನಿಶಾನೆ ತೋರುತ್ತಾ ಕಾದು ನೋಡಬೇಕಿದೆ. ದಿನೇ ದಿನೆ ಹೆಚ್ಚುತ್ತಿರುವ ಕೊರೊನಾ ಹಾವಳಿಯಿಂದ ಟೂರ್ನಿಗೆ ಅವಕಾಶ ಸಿಗೋದು ಡೌಟ್ ಎನ್ನಲಾಗುತ್ತಿದೆ.