ನ್ಯೂಯಾರ್ಕ್ :ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಗ್ರ್ಯಾಂಡ್ ಸ್ಲ್ಯಾಮ್ನಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಿರಲಿಲ್ಲ. ಆದರೆ, ಒಂದು ವರ್ಷದ ಬಳಿಕ ಯುಎಸ್ ಓಪನ್ನಲ್ಲಿ ಶೇ.100ರಷ್ಟು ಪ್ರೇಕ್ಷಕರ ಸಾಮರ್ಥ್ಯದೊಂದಿಗೆ ಪಂದ್ಯ ನಡೆಸಲು ತೀರ್ಮಾನಿಸಲಾಗಿದೆ ಎಂದು ಯುಎಸ್ ಟೆನಿಸ್ ಅಸೋಸಿಯೇಷನ್(ಯುಎಸ್ಟಿಎ) ಪ್ರಕಟಿಸಿದೆ.
ಯುಎಸ್ ಓಪನ್ : ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ - ಯುಎಸ್ ಟೆನಿಸ್ ಅಸೋಸಿಯೇಷನ್
ಆಗಸ್ಟ್ 30 ರಿಂದ ಸೆಪ್ಟೆಂಬರ್ 12ರವರೆಗೆ ನ್ಯೂಯಾರ್ಕ್ನ ಫ್ಲಶಿಂಗ್ ಮೆಡೋಸ್ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ 7,00,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ..
ಆಗಸ್ಟ್ 30 ರಿಂದ ಸೆಪ್ಟೆಂಬರ್ 12ರವರೆಗೆ ನ್ಯೂಯಾರ್ಕ್ನ ಫ್ಲಶಿಂಗ್ ಮೆಡೋಸ್ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ 7,00,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಯುಎಸ್ ಓಪನ್ 2020ರ ಆಸ್ಟ್ರೇಲಿಯನ್ ಓಪನ್ ನಂತರ ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಯುಎಸ್ ಓಪನ್ ವೆಬ್ಸೈಟ್ನಲ್ಲಿನ ಹೇಳಿಕೆಯ ಪ್ರಕಾರ, "ಯುಎಸ್ಟಿಎ ಬಿಲ್ಲಿ ಜೀನ್ ಕಿಂಗ್ ನ್ಯಾಷನಲ್ ಟೆನಿಸ್ ಕೇಂದ್ರದಲ್ಲಿ ನಡೆಯಲಿರುವ 2021 ಯುಎಸ್ ಓಪನ್ನ ಎರಡು ವಾರಗಳ ಪಂದ್ಯಾವಳಿಗೆ ಶೇ.100ರಷ್ಟು ಸಾಮರ್ಥ್ಯದೊಂದಿಗೆ ಪ್ರೇಕ್ಷಕರನ್ನು ಅನುಮತಿಸಲು ತೀರ್ಮಾನಿಸಲಾಗಿದೆ. ಜುಲೈ 15ರಿಂದ ಸಾರ್ವಜನಿಕರಿಗೆ ಈವೆಂಟ್ನ ಟಿಕೆಟ್ಗಳನ್ನು ಮಾರಾಟಕ್ಕೆ ಇಡಲಾಗುವುದು" ಎಂದು ತಿಳಿಸಲಾಗಿದೆ.