ಫ್ಲೋರಿಡಾ (ಅಮೆರಿಕ): ಯುಎಸ್ ಓಪನ್ 2020ರಲ್ಲಿ ಗ್ರ್ಯಾಂಡ್ಸ್ಲ್ಯಾಮ್ ಪ್ರಶಸ್ತಿ ಪಡೆದ ಬಳಿಕ ಜಪಾನ್ ಟೆನ್ನಿಸ್ ತಾರೆ ನವೋಮಿ ಒಸಾಕಾ ವಿಶ್ವ ಟೆನ್ನಿಸ್ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.
22 ವರ್ಷದ ಇವರು ಯುಎಸ್ ಓಪನ್ ಟೆನ್ನಿಸ್ ಫೈನಲ್ ಪಂದ್ಯದಲ್ಲಿ ಬೆಲಾರಸ್ನ ಟೆನ್ನಿಸ್ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಅವರ ವಿರುದ್ಧ ಗೆಲುವು ಕಂಡಿದ್ದರು. ಇದರಿಂದಾಗಿ ಆರನೇ ಸ್ಥಾನದಲ್ಲಿದ್ದ ನವೋಮಿ ಒಸಾಕಾ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಅಜರೆಂಕಾ ವಿರುದ್ಧ 1-6, 6-3, 6-3 ಸೆಟ್ಗಳಲ್ಲಿ ಗೆದ್ದ ನವೋಮಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೂರು ಸ್ಥಾನಗಳಷ್ಟು ಏರಿಕೆ ಕಂಡಿದ್ದಾರೆ.
ಸುಮಾರು 1 ಗಂಟೆ 53 ನಿಮಿಷಗಳ ಹೋರಾಟದ ಬಳಿಕ ನ್ಯೂಯಾರ್ಕ್ ನಗರದಲ್ಲಿರುವ ಅರ್ಥರ್ ಆಶೆ ಸ್ಟೇಡಿಯಂನಲ್ಲಿ ನವೋಮಿ ಗ್ರ್ಯಾಂಡ್ಸ್ಲ್ಯಾಮ್ ಕಿರೀಟ ಮುಡಿದಿದ್ದಾರೆ.
ವಿಶ್ವ ಟೆನ್ನಿಸ್ ರ‍್ಯಾಂಕಿಂಗ್ ಅತಿ ಹೆಚ್ಚು ಗ್ರ್ಯಾಂಡ್ಸ್ಲ್ಯಾಮ್ ಪಡೆದಿರುವವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಸೆರೆನಾ ವಿಲಿಯಮ್ಸ್, ಎರಡನೇ ಸ್ಥಾನದಲ್ಲಿ ವೀನನ್ಸ್ ವಿಲಿಯಮ್ಸ್ ಹಾಗೂ ಮೂರನೇ ಸ್ಥಾನದಲ್ಲಿ ಕಿಮ್ ಕ್ಲಿಜ್ಸ್ಟರ್ಸ್ ಇದ್ದು, ನಾಲ್ಕನೇ ಸ್ಥಾನವನ್ನು ಮೂರು ಗ್ರ್ಯಾಂಡ್ಸ್ಲ್ಯಾಮ್ ಪಡೆದ ಏಂಜಲಿಕ್ಯೂ ಕೆರ್ಬರ್ ಜೊತೆಗೆ ನವೋಮಿ ಹಂಚಿಕೊಂಡಿದ್ದಾರೆ.
ಸದಕ್ಕೆ ಅಜರೆಂಕಾ ವಿಶ್ವ ಟೆನ್ನಿಸ್ ರ್ಯಾಂಕಿಂಗ್ನಲ್ಲಿ 13 ಸ್ಥಾನಗಳಷ್ಟು ಜಿಗಿಗಿದ್ದು, ಈಗ 14ನೇ ಸ್ಥಾನದಲ್ಲಿದ್ದಾರೆ. ಅಮೆರಿಕಾದ ಟೆನ್ನಿಸ್ ಆಟಗಾರ್ತಿ ಜೆನ್ನಿಫರ್ ಬ್ರಾಡಿ 16 ಸ್ಥಾನಗಳಷ್ಟು ಏರಿಕೆ ಕಂಡಿದ್ದು, ಇದೀಗ 25ನೇ ಸ್ಥಾನದಲ್ಲಿದ್ದಾರೆ.